Loading..!

ಸಿಬ್ಬಂದಿ ಆಯ್ಕೆ ಆಯೋಗ (SSC) ದಿಂದ ಜ್ಯೂನಿಯರ ಇಂಜಿನಿಯರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಪ್ರಕಟ ಮತ್ತು online ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ
| Date:19 ಆಗಸ್ಟ್ 2019
not found
SSC JE 2019 ಅಧಿಸೂಚನೆ: ಸಿಬ್ಬಂದಿ ಆಯ್ಕೆ ಆಯೋಗ (SSC) ಇಂದು ಎಸ್‌ಎಸ್‌ಸಿ ಜೆಇ ನೇಮಕಾತಿ ಅಧಿಸೂಚನೆಯನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಂದರೆ 13 ಆಗಸ್ಟ್ 2019 ರಂದು ಬಿಡುಗಡೆ ಮಾಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಎಸ್‌ಎಸ್‌ಸಿ 2019 ಜೂನಿಯರ್ ಇಂಜಿನಿಯರ್ ಹುದ್ದೆಗೆ ಎಸ್‌ಎಸ್‌ಸಿ ಅಧಿಕೃತ ವೆಬ್‌ಸೈಟ್ ಅಂದರೆ www.ssc.nic ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ ಸರ್ಕಾರದಲ್ಲಿನ ವಿವಿಧ ಸಚಿವಾಲಯಗಳು / ಇಲಾಖೆಗಳು / ಸಂಸ್ಥೆಗಳಲ್ಲಿ ಖಾಲಿ ಇರುವ JE ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ನಡೆಯಲಿದೆ.
SSC JE 2019 ಆನ್‌ಲೈನ್ ಅರ್ಜಿ ಇಂದಿನಿಂದ ಪ್ರಾರಂಭವಾಗುತ್ತಿದೆ. ಎಸ್‌ಎಸ್‌ಸಿ ಜೂನಿಯರ್ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 12 ಸೆಪ್ಟೆಂಬರ್ 2019.

* ಆನ್‌ಲೈನ್ ಅರ್ಜಿಯ ಪ್ರಾರಂಭ ದಿನಾಂಕ - 13 ಆಗಸ್ಟ್ 2019
* ಆನ್‌ಲೈನ್ ಅರ್ಜಿಯ ಕೊನೆಯ ದಿನಾಂಕ - 12 ಸೆಪ್ಟೆಂಬರ್ 2019 05:00 PM ವರೆಗೆ
* ಆನ್‌ಲೈನ್ ಶುಲ್ಕ ಪಾವತಿ ಮಾಡಲು ಮತ್ತು ಆಫ್‌ಲೈನ್ ಚಲನ್ ಡೌನ್ಲೋಡ್ ಮಾಡಲು ಕೊನೆಯ ದಿನಾಂಕ - 14 ಸೆಪ್ಟೆಂಬರ್ 2019 17:00 ವರೆಗೆ
* ಚಲನ್ ಮೂಲಕ ಪಾವತಿಸಲು ಕೊನೆಯ ದಿನಾಂಕ (ಬ್ಯಾಂಕಿನ ಕೆಲಸದ ಸಮಯದಲ್ಲಿ) - 16 ಸೆಪ್ಟೆಂಬರ್ 2019
* ಎಸ್‌ಎಸ್‌ಸಿ ಜೆಇ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ದಿನಾಂಕ - ಶೀಘ್ರದಲ್ಲೇ ತಿಳಿಸಲಾಗುವದು
* ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆಯ ದಿನಾಂಕ - ಶೀಘ್ರದಲ್ಲೇ ತಿಳಿಸಲಾಗುವದು
ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಸಾಮಾನ್ಯ ಜ್ಞಾನ (General Knowledge) ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments