ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) ದಲ್ಲಿ ಖಾಲಿ ಇರುವ 6,506 ಗ್ರೂಪ್ ಬಿ ಮತ್ತು ಗ್ರೂಪ್ ಸಿ ಹುದ್ದೆಗಳ ನೇಮಕಾತಿ
Published by: Hanamant Katteppanavar | Date:12 ಜನವರಿ 2021
ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (SSC) ಯಲ್ಲಿ ಖಾಲಿ ಇರುವ 6,506 ಗ್ರೂಪ್ ಬಿ (ಗೆಜೆಟೆಡ್ / ನಾನ್ ಗೆಜೆಟೆಡ್) ಮತ್ತು ವಿವಿಧ ಗ್ರೂಪ್-ಸಿ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಪೂರ್ಣ ಸಮಯದ ಆಧಾರದ ಮೇಲೆ ಭಾರತದಾದ್ಯಂತ ವಿವಿಧ ಇಲಾಖೆಗಳಲ್ಲಿ ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಲಾಗುವುದು. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು 2020 ಡಿಸೆಂಬರ್ 29 ರಂದು ಪ್ರಾರಂಭಗೊಂಡು ಮತ್ತು ಜನವರಿ 31, 2021 ರಂದು ಕೊನೆಗೊಳ್ಳುತ್ತದೆ.
* ಪ್ರಮುಖ ದಿನಾಂಕಗಳು :
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 29-12-2020
- ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-01-2021
- ಆನ್‌ಲೈನ್ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ: 02-02-2021
* ಹುದ್ದೆಗಳ ವಿವರ :
- ಗ್ರೂಪ್ ಬಿ (ನಾನ್ ಗೆಜೆಟೆಡ್)- 3,513 ಹುದ್ದೆಗಳು
- ಗ್ರೂಪ್ ಸಿ- 2,743 ಹುದ್ದೆಗಳು ಮತ್ತು
- ಗ್ರೂಪ್ ಬಿ (ಗೆಜೆಟೆಡ್)- 250 ಹುದ್ದೆಗಳು
ಒಟ್ಟು ಹುದ್ದೆಗಳು - 6,506 ಹುದ್ದೆಗಳು
No. of posts: 6506
Comments