Loading..!

ಪದವಿ ಪಾಸಾದ ಅಭ್ಯರ್ಥಿಗಳಿಂದ ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:5 ಮಾರ್ಚ್ 2025
not found

ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರ ಕಚೇರಿ ಬೆಂಗಳೂರು ಇಲ್ಲಿ ಖಾಲಿ ಇರುವ 4 ಸಮಾಲೋಚಕರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ಅಧಿಸೂಚನೆ ದಿನಾಂಕ: 01.03.2025 ರಂದು ಪ್ರಕಟಗೊಂಡಿದ್ದು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಈ ಹುದ್ದೆಗಳನ್ನು ತಾತ್ಕಾಲಿಕವಾಗಿ ನೇರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತದೆ.  ಆಸಕ್ತಿ ಹೊಂದಿರುವ ಹಾಗೂ ಈ ನೇಮಕಾತಿಗೆ ಬೇಕಾದ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಜಿ ಸಲ್ಲಿಸಿ.  


- ಹುದ್ದೆಗಳ ವಿವರ :
ಪ್ಲಾನಿಂಗ್ ಕನ್ಸಲ್ಟೆಂಟ್ : 1
ಅಕೌಂಟ್ಸ್ ಕನ್ಸಲ್ಟೆಂಟ್ : 1
ವೋಕೆಶನಲ್ ಎಜುಕೇಶನ್ ಮತ್ತು ಕ್ವಾಲಿಟಿ ಸೆಕ್ಷನ್ ಕನ್ಸಲ್ಟೆಂಟ್ : 1
ಮೀಡಿಯಾ ಮತ್ತು ಡಾಕ್ಯುಮೆಂಟೇಷನ್ ಕನ್ಸಲ್ಟೆಂಟ್ : 1


ಅರ್ಹತೆಗಳು : 
1️⃣ ಪ್ಲಾನಿಂಗ್ ಕನ್ಸಲ್ಟೆಂಟ್ (01 ಹುದ್ದೆ) :  
- ಶೈಕ್ಷಣಿಕ ಅರ್ಹತೆ : ಸ್ನಾತಕೋತ್ತರ ಪದವಿ ಅಥವಾ ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
- ಅನುಭವ : 3-10 ವರ್ಷಗಳ ಯೋಜನೆ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಡೇಟಾ ಅನಾಲಿಟಿಕ್ಸ್ ಅನುಭವ ಹೊಂದಿರಬೇಕು.  
- ಪ್ರಾಥಮಿಕ ಕೌಶಲ್ಯಗಳು : ಕನ್ನಡ ಮತ್ತು ಇಂಗ್ಲೀಷ್ ಪ್ರಾವೀಣ್ಯತೆ, ವಿಶ್ಲೇಷಣೆ, ಸಂವಹನ ಕೌಶಲ್ಯಗಳು, ಡೇಟಾ ಅನಾಲಿಸಿಸ್, MS Office ಇತ್ಯಾದಿ.  
- ಗರಿಷ್ಠ ವಯಸ್ಸು : 35 ವರ್ಷ  


2️⃣ ಅಕೌಂಟ್ಸ್ ಕನ್ಸಲ್ಟೆಂಟ್ (01 ಹುದ್ದೆ) : 
- ಶೈಕ್ಷಣಿಕ ಅರ್ಹತೆ : M.Com, CA-Internship ಅಥವಾ CA Articleship  
- ಅನುಭವ : ಕನಿಷ್ಠ 5 ವರ್ಷಗಳ ಹಣಕಾಸು ನಿರ್ವಹಣಾ ಅನುಭವ ಹೊಂದಿರಬೇಕು.   
- ಇತರ ಕೌಶಲ್ಯಗಳು : ಟ್ಯಾಲಿ, ಡೇಟಾ ವಿಶ್ಲೇಷಣೆ, ಡಬಲ್ ಎಂಟ್ರಿ ಅಕೌಂಟಿಂಗ್, ಕನ್ನಡ ಹಾಗೂ ಇಂಗ್ಲಿಷ್ ಟೈಪಿಂಗ್ ಇತ್ಯಾದಿ.   
- ವಯಸ್ಸು : 35 ರಿಂದ 70 ವರ್ಷ  


3️⃣ ವೋಕೆಶನಲ್ ಎಜುಕೇಶನ್ ಮತ್ತು ಕ್ವಾಲಿಟಿ ಸೆಕ್ಷನ್ ಕನ್ಸಲ್ಟೆಂಟ್ (01 ಹುದ್ದೆ) :   
- ಶೈಕ್ಷಣಿಕ ಅರ್ಹತೆ : ಶೋಷಿಯಲ್ ವರ್ಕ್‌ನಲ್ಲಿ ಮಾಸ್ಟರ್ ಡಿಗ್ರೀ (70% ಅಂಕಗಳು ಕಡ್ಡಾಯ)  
- ಅನುಭವ : ಕನಿಷ್ಠ 2 ವರ್ಷಗಳ ಯೋಜನೆ ನಿರ್ವಹಣೆ, Excel, AI, ವೆಬ್ ಡೆವಲಪ್‌ಮೆಂಟ್ ಮತ್ತು ಕಂಟೆಂಟ್ ಕ್ರಿಯೇಷನ್ ಹೊಂದಿರಬೇಕು.  
- ಇತರ ಕೌಶಲ್ಯಗಳು : ಕನ್ನಡ ಮತ್ತು ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಹಾಗೂ ಫೀಲ್ಡ್ ವಿಸಿಟ್‌ಗೆ ಸಿದ್ಧತೆ ಇತ್ಯಾದಿ.   
- ವಯಸ್ಸು: 35 ರಿಂದ 60 ವರ್ಷ  


4️⃣ ಮೀಡಿಯಾ ಮತ್ತು ಡಾಕ್ಯುಮೆಂಟೇಷನ್ ಕನ್ಸಲ್ಟೆಂಟ್ (01 ಹುದ್ದೆ) : 
- ಶೈಕ್ಷಣಿಕ ಅರ್ಹತೆ : IT ಅಥವಾ ಮಾಸ್ ಮೀಡಿಯಾ ಮತ್ತು ಕಮ್ಯುನಿಕೇಷನ್‌ನಲ್ಲಿ ಡಿಗ್ರಿ  
- ಅನುಭವ: ಕನಿಷ್ಠ 2 ವರ್ಷಗಳ ಸಾಮಾಜಿಕ ಮಾಧ್ಯಮ ವಿಷಯ ಅಭಿವೃದ್ಧಿ ಅನುಭವ ಹೊಂದಿರಬೇಕು.
- ವಯಸ್ಸು: 35 ರಿಂದ 60 ವರ್ಷ  


📌 ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ :15.03.2025  


📌ಸಮಗ್ರ ಶಿಕ್ಷಣ ಕರ್ನಾಟಕ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಆಡಳಿತ ಶಾಖೆಯ ಅಧಿಕಾರಿಗಳನ್ನು ಸಂಪರಕಿಸಿ ಅಗತ್ಯ ವಿವರಗಳನ್ನು ಪಡೆದುಎಲ್ಲ ದಾಖಲೆಗಳೊಂದಿಗೆ ಭೌತಿಕವಾಗಿ ಅಥವಾ ssajda123@gmail.com ಗೆ ಇಮೇಲ್ ಮುಖಾಂತರ ಅರ್ಜಿಗಳನ್ನು ಕಳುಹಿಸಬಹುದು. 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:  

📞 9448999310, 9448999423  

Comments