ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಕರ್ನಾಟಕ (RDPR Karnataka)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಯೋಜನೆಗಳ ನಿರ್ವಹಣೆಗೆ ಹೊಸ ಸಮಾಲೋಚಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಮುಂದಿನ ಒಂದು ವರ್ಷದ ಅವಧಿಗೆ ನೇಮಕಾತಿ ನಡೆಸುತ್ತಿದೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳು ಫೆಬ್ರವರಿ 12, 2025, ಬೆಳಿಗ್ಗೆ 11:00 ಗಂಟೆಗೆ ನಡೆಯುವ ನೇರ ಸಂದರ್ಶನ (Walk-In Interview) ನಲ್ಲಿ ಭಾಗವಹಿಸಬಹುದು.
ಹುದ್ದೆಯ ವಿವರ :
ಹುದ್ದೆಯ ಹೆಸರು : ಸಮಾಲೋಚಕರು
ಹುದ್ದೆಗಳ ಸಂಖ್ಯೆ : 01
ಸಂಬಳ ಮತ್ತು ಇತರೆ ವಿವರಗಳು : ಆಯೋಗದ ನಿಯಮಗಳ ಪ್ರಕಾರ ನಿರ್ಧರಿಸಲಾಗುವುದು.
ಸಂದರ್ಶನ ದಿನಾಂಕ ಮತ್ತು ಸ್ಥಳ :
ದಿನಾಂಕ : 12 ಫೆಬ್ರುವರಿ 2025
ಸಮಯ : ಬೆಳಿಗ್ಗೆ 11:00 ಗಂಟೆಗೆ
ಸ್ಥಳ : ಆಯೋಗದ ಕಚೇರಿ, ಕರ್ನಾಟಕ ರಾಜ್ಯ ಪಂಚಾಯತ್ ರಾಜ್ ಆಯೋಗ, ಕಾಳಿದಾಸ ಮಾರ್ಗ ಕೆ.ಜಿ. ರಸ್ತೆ, ಬೆಂಗಳೂರು - 560009.
- ಈ ಹುದ್ದೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಯೋಜನೆಗಳ ಸಮಾಲೋಚನೆಯ ಕಾರ್ಯವನ್ನು ನಿರ್ವಹಿಸಲು ಅನುಕೂಲವಾಗಲಿದೆ. ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ ಹಾಗೂ ಅನುಭವವನ್ನು ಸಲ್ಲಿಸಲು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬಹುದು.
ಮುಂಬರುವ ಉದ್ಯೋಗಾಕಾಂಕ್ಷಿಗಳಿಗೆ ಇದು ಸುವರ್ಣಾವಕಾಶ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿ ಕೋರಲಾಗಿದೆ.
Comments