Loading..!

ರಾಷ್ಟೀಯ ತಾಂತ್ರಿಕ ಮಹಾವಿದ್ಯಾಲಯ ಕರ್ನಾಟಕ (NITK)ದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Tags: Degree
Published by: Yallamma G | Date:25 ಜನವರಿ 2025
not found

ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ ಕರ್ನಾಟಕ (NITK)ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಗಳನ್ನು ಆಹ್ವನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 10, 2025ರ ಸಂಜೆ 5:30 ಗಂಟೆಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಪೂರ್ಣ ಅಧಿಸೂಚನೆಯನ್ನು  ನಂತರ ಅರ್ಜಿಯನ್ನು ಸಲ್ಲಿಸಬೇಕು.


ಹುದ್ದೆಗಳ ವಿವರ: 18
ಮುಖ್ಯ ವೈಜ್ಞಾನಿಕ ಅಧಿಕಾರಿ/ಮುಖ್ಯ ತಾಂತ್ರಿಕ ಅಧಿಕಾರಿ : 2
ಮುಖ್ಯ ವಿದ್ಯಾರ್ಥಿ ಚಟುವಟಿಕೆ ಮತ್ತು ಕ್ರೀಡಾ ಅಧಿಕಾರಿ : 1
ಮುಖ್ಯ ಎಂಜಿನಿಯರ್ : 1
ಉಪ ನೋಂದಣಾಧಿಕಾರಿ : 2
ಉಪ ಗ್ರಂಥಪಾಲಕ : 1
ಸಹಾಯಕ ನೋಂದಣಾಧಿಕಾರಿ : 5
ಸಹಾಯಕ ಗ್ರಂಥಪಾಲಕ : 1
ವೈದ್ಯಾಧಿಕಾರಿ : 3
ವಿದ್ಯಾರ್ಥಿ ಚಟುವಟಿಕೆ ಮತ್ತು ಕ್ರೀಡಾ ಅಧಿಕಾರಿ : 1
ಕಾರ್ಯನಿರ್ವಾಹಕ ಎಂಜಿನಿಯರ್ : 1


ವಿದ್ಯಾರ್ಹತೆ :
ಅಭ್ಯರ್ಥಿಗಳು ಪದವಿ, ಬಿಇ, ಬಿಟೆಕ್, ಎಂಸಿಎ, ಎಂಎಸ್ಸಿ, ಎಂಬಿಬಿಎಸ್ ಮುಂತಾದ ವಿದ್ಯಾರ್ಹತೆಗಳನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಹತೆಯನ್ನು ಹೊಂದಿರಬೇಕು.


ಅರ್ಜಿ ಶುಲ್ಕ:
ಸಾಮಾನ್ಯ, ಓಬಿಸಿ-ಎನ್‌ಸಿಎಲ್, ಇಡಬ್ಲ್ಯೂಎಸ್ ಅಭ್ಯರ್ಥಿಗಳು ರೂ. 1500/- ಅರ್ಜಿ ಶುಲ್ಕವನ್ನು ಪಾವತಿಸಬೇಕು. ಎಸ್‌ಸಿ, ಎಸ್‌ಟಿ, ಅಂಗವಿಕಲ (ಪಿಡಬ್ಲ್ಯೂಡಿ), ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ. 


ವಯೋಮಿತಿ :ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ : 56 ವರ್ಷಗಳು   


ಮುಖ್ಯ ದಿನಾಂಕಗಳು: ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಫೆಬ್ರವರಿ 10, 2025 (ಸಂಜೆ 5:30 ಗಂಟೆಯವರೆಗೆ).


ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್‌ಲೈನ್ ಅರ್ಜಿ ಸಲ್ಲಿಸಲು, NITK ಅಧಿಕೃತ ವೆಬ್‌ಸೈಟ್ ಭೇಟಿ ನೀಡಿ

Comments