Loading..!

ಶೀಘ್ರದಲ್ಲೇ ರಾಜ್ಯ ಪೊಲೀಸ್ ಇಲಾಖೆಯಿಂದ 1500 ಸಿವಿಲ್ ಕಾನ್ಸ್ ಸ್ಟೇಬಲ್ ಹುದ್ದೆಗಳ ಭರ್ಜರಿ ಹುದ್ದೆಗಳ ನೇಮಕಾತಿ! ಈ ಕುರಿತು ಮಾಹಿತಿ ನಿಮಗಾಗಿ
Published by: Savita Halli | Date:11 ಮಾರ್ಚ್ 2022
not found

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2022-23 ನೇ ಸಾಲಿನಲ್ಲಿ ಒಟ್ಟು 1500 ಸಿವಿಲ್ ಪೊಲೀಸ್ ಕಾನ್ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಿದೆ. ಈ  ನೇಮಕಾತಿಯ ಕುರಿತು  ಏಪ್ರಿಲ್ 1 ರಿಂದ ನೇಮಕ ಪ್ರಕ್ರಿಯೆ ಆರಂಭಿಸಲು ಇಲಾಖೆಯು ಸಿದ್ಧತೆ ನಡೆಸಿದ್ದು, ಹುದ್ದೆಗಳ ಮೀಸಲಾತಿಯನ್ನು ಅಂತಿಮಗೊಳಿಸಿದೆ. ಒಟ್ಟು ಹುದ್ದೆಗಳ ಪೈಕಿ 432 ಹುದ್ದೆಗಳನ್ನು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.


ಒಟ್ಟು ಹುದ್ದೆಗಳು - 1500
ಹಂಚಿಕೆ ಮಾಡಲಾದ ಘಟಕಗಳು
(Non H.k) - 1068
* ಬೆಂಗಳೂರು ನಗರ - 520
* ಮೈಸೂರು ನಗರ - 25
* ಮಂಗಳೂರು ನಗರ - 50
* ಹುಬ್ಬಳ್ಳಿ ಧಾರವಾಡ ನಗರ - 45
* ಬೆಳಗಾವಿ ನಗರ - 75
* ಬೆಂಗಳೂರು ಜಿಲ್ಲೆ - 60
* ತುಮಕೂರು - 45
* ರಾಮನಗರ - 30
* ಮೈಸೂರು - 40
* ಹಾಸನ - 30
* ಮಂಡ್ಯ - 30
* ಶಿವಮೊಗ್ಗ - 25
* ದಕ್ಷಿಣ ಕನ್ನಡ ಮಂಗಳೂರು - 45
* ಬೆಳಗಾವಿ - 30
* ರೈಲ್ವೇಸ್ ಬೆಂಗಳೂರು - 18


(H.K) - 432
* ಬೆಂಗಳೂರು ನಗರ - 73
* ರೈಲ್ವೇಸ್ ಬೆಂಗಳೂರು - 17
* ಕಲಬುರ್ಗಿ ನಗರ - 20
* ಕಲಬುರಗಿ ಜಿಲ್ಲೆ - 10
* ಬೀದರ್ - 79
* ಯಾದಗಿರಿ - 25
* ಬಳ್ಳಾರಿ / ವಿಜಯ ನಗರ - 107
* ರಾಯಚೂರು - 63 
* ಕೊಪ್ಪಳ - 38 ಹುದ್ದೆಗಳನ್ನು ಮೀಸಲಿರಿಸಲಾಗಿದೆ.
ಈ ಹುದ್ದೆಗಳಿಗೆ ಸಂಬಂಧಪಟ್ಟ ಕಮಿಷನರೇಟ್ ಘಟಕಗಳಿಂದ ವರ್ಗೀಕರಣದ ಮಾಹಿತಿ ಪಡೆದು ರಿಂದ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲು ಇಲಾಖೆ ಸೂಚಿಸಿದೆ.
* ಈ ನೇಮಕಾತಿಯ ಕುರಿತು ಇನ್ನು ಹೆಚ್ಚಿನ ಸವಿವರವಾದ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವದು, ನಿರೀಕ್ಷಿಸಿ

No. of posts:  1500

Comments

User ಮಾರ್ಚ್ 14, 2022, 4:22 ಅಪರಾಹ್ನ
User ಮೇ 2, 2022, 2:50 ಅಪರಾಹ್ನ