ಸಮಾಜ ಕಲ್ಯಾಣ ಇಲಾಖೆಯಿಂದ ಖಾಲಿ ಇರುವ ಹುದ್ದೆಗೆ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ
ಕರ್ನಾಟಕ ಸರಕಾರ, ಸಮಾಜ ಕಲ್ಯಾಣ ಇಲಾಖೆಯಿಂದ ವಿಶೇಷ ವಕೀಲರ ತಾತ್ಕಾಲಿಕ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕವಾದ 13-10-2021 ಸಂಜೆ 5 ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
(ವಿಶೇಷ ಸೂಚನೆ :10/07/2019 ರ ಅಧಿಸೂಚನೆಗೆ ಸಂಬಂದಿಸಿದಂತೆ ಅರ್ಜಿ ಸಲ್ಲಿಸಿದವರು ಸಹ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸೂಚಿಸಿದೆ.)
ಅರ್ಹತಾ ಮಾನದಂಡಗಳು:
1. ಕಾನೂನು ಪದವೀಧರರಾಗಿರಬೇಕು.
2. ಅರ್ಜಿದಾರರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಕ್ಕೆ ಸೇರಿದ ಕರ್ನಾಟಕ ರಾಜ್ಯದ ಅಭ್ಯರ್ಥಿಯಾಗಿರಬೇಕು.
3. ವಕೀಲರಾಗಿ ಕನಿಷ್ಟ 15 ವರ್ಷಗಳ ಅನುಭವ ಹೊಂದಿರಬೇಕು.
4. ವಕೀಲರಾಗಿ 10 ವರ್ಷಗಳ ಕಾಲ ಮಾನ್ಯ ಉಚ್ಚನ್ಯಾಯಾಲದಲ್ಲಿ ಅಭ್ಯಾಸ ಮಾಡುತ್ತಿರುವವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು.
5. ವಕೀಲರ ನೇಮಕಾತಿಯು ತಾತ್ಕಾಲಿಕವಾಗಿರುತ್ತದೆ.
6. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಹಿತಾಶಕ್ತಿಯನ್ನು ಕಾಪಾಡುವ ದೃಷ್ಟಿಯಿಂದ ಅರ್ಜಿ ದಾರರು ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದವರಾಗಿರಬೇಕು.
7. ಸಂವಿಧಾನಾತ್ಮಕ ವಿಷಯ ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ವಿಷಯದಲ್ಲಿ ನೈಪುಣ್ಯತೆಯನ್ನು ಹೊಂದಿರತಕ್ಕದ್ದು.
8. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 40 ವರ್ಷಗಳಿಂದ ಗರಿಷ್ಟ 65 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಿದೆ.
9. ಮಹಿಳಾ ಅಭ್ಯರ್ಥಿಗಳಿಗೂ ಸಹ ಪ್ರಾತಿನಿದ್ಯ ನೀಡಲಾಗುವುದು.
10. ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರಿಗೆ ಆದ್ಯತೆ ನೀಡಲಾಗುವುದು.
11. ಬಾರ್ ಕೌನ್ಸಿಲ್ ನಿಂದ ಪ್ರಮಾಣ ಪತ್ರ ಹಾಗೂ ಸದಸ್ಯತ್ವವನ್ನು ಕಡ್ಡಾಯಗೊಳಿಸಲಾಗಿದೆ.
Comments