ಭಾರತೀಯ ಬಂದರುಗಳ ಸಂಘ (IPA)ಇಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
ಭಾರತೀಯ ಬಂದರುಗಳ ಸಂಘಟನೆ (Indian Ports Association) 2025 ನೇ ಸಾಲಿನಲ್ಲಿ ಮಂಗಳೂರು (ಕರ್ನಾಟಕ) ಮತ್ತು ಚೆನ್ನೈ (ತಮಿಳುನಾಡು) ನಗರಗಳಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) ಮತ್ತು ಕಿರಿಯ ಕಾರ್ಯನಿರ್ವಾಹಕ (ವಿದ್ಯುತ್) ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 10 ಫೆಬ್ರವರಿ 2025 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) : 1
- ಕಿರಿಯ ಕಾರ್ಯನಿರ್ವಾಹಕ (ವಿದ್ಯುತ್) : 2
ಅರ್ಹತೆ :
ಬಿಇ, ಬಿಟೆಕ್ (ವಿದ್ಯುತ್) ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವ ವಿದ್ಯಾಲಯಗಳಿದ ಪಾಸಾಗಿರಬೇಕು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವೇತನ :
- ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ವಿದ್ಯುತ್) : ರೂ. 50,000 – 1,60,000/-
- ಕಿರಿಯ ಕಾರ್ಯನಿರ್ವಾಹಕ (ವಿದ್ಯುತ್) : ರೂ. 30,000 – 1,20,000/-
ವಯೋಮಿತಿ :
10 ಫೆಬ್ರವರಿ 2025 ರಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 30 ವರ್ಷವಾಗಿರಬೇಕು.
ವಯೋಮಿತಿ ಸಡಿಲಿಕೆ :
OBC ಅಭ್ಯರ್ಥಿಗಳಿಗೆ : 3 ವರ್ಷ
SC/ST ಅಭ್ಯರ್ಥಿಗಳಿಗೆ : 5 ವರ್ಷ
PwBD ಅಭ್ಯರ್ಥಿಗಳಿಗೆ : 10 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿತ್ತದೆ.
ಅರ್ಜಿ ಶುಲ್ಕ :
ಎಸ್‌ಸಿ/ಎಸ್‌ಟಿ/ಮಹಿಳಾ ಅಭ್ಯರ್ಥಿಗಳು: ರೂ. 200/-
ಓಬಿಸಿ/EWS ಅಭ್ಯರ್ಥಿಗಳು: ರೂ. 300/-
ಸಾಮಾನ್ಯ ವರ್ಗದ ಅಭ್ಯರ್ಥಿಗಳು: ರೂ. 400/-
ಮಾಜಿ ಸೈನಿಕರು/PwBD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿಯನ್ನು ನೀಡಲಾಗಿದೆ.
ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬೇಕು.
ಆಯ್ಕೆ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಮುಖ್ಯ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 19 ಜನವರಿ 2025
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಫೆಬ್ರವರಿ 2025
Comments