Loading..!

ಭಾರತೀಯ ನೌಕಾಪಡೆಯಲ್ಲಿ ಖಾಲಿ ಇರುವ ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳ ನೇಮಕಕ್ಕೆ ಅರ್ಜಿ ಅಹ್ವಾನ
Tags: ITI SSLC
Published by: Rukmini Krushna Ganiger | Date:23 ಸೆಪ್ಟೆಂಬರ್ 2021
not found

- ಭಾರತೀಯ ಸಶಸ್ತ್ರ ಪಡೆಗಳ ನೌಕಾ ಶಾಖೆಯಾಗಿರುವ, ಭಾರತದ ರಾಷ್ಟ್ರಪತಿಯು ಸುಪ್ರೀಂ ಕಮಾಂಡರ್ ಆಗಿರುವ ರಕ್ಷಣಾ ಸಚಿವಾಲಯದ ಅಡಿಯಲ್ಲಿರುವ 'ಭಾರತೀಯ ನೌಕಾಪಡೆ' ಯಲ್ಲಿ ಖಾಲಿ ಇರುವ 217 ಟ್ರೇಡ್ಸ್‌ಮ್ಯಾನ್ ಮೇಟ್/ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಗ್ರೂಪ್ ಸಿ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ, ಆಸಕ್ತ ಮತ್ತು ಅನುಭವಿ ಅಭ್ಯರ್ಥಿಗಳಿಂದ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಫ್ ಲೈನ್ ಮೂಲಕ ದಿನಾಂಕ : 02/11/2021 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.


* ಹುದ್ದೆಗಳ ವಿವರ

1. ಪಶ್ಚಿಮ ನೌಕಾ ಕಮಾಂಡ್ - 89  

2. ಪೂರ್ವ ನೌಕಾ ಕಮಾಂಡ್ - 60  

3. ಅಂಡಮಾನ್ ಮತ್ತು ನಿಕೋಬಾರ್ ನೌಕಾ ಕಮಾಂಡ್ - 50 

4. ದಕ್ಷಿಣ ನೌಕಾ ಕಮಾಂಡ್ - 18


- ಅರ್ಜಿ ಸಲ್ಲಿಸುವ ವಿಳಾಸ

ನೌಕಾಪಡೆಯ ಮುಖ್ಯಸ್ಥರು,

ನಾಗರಿಕ ಮಾನವಶಕ್ತಿ ಯೋಜನೆ ಮತ್ತು ನೇಮಕಾತಿ ನಿರ್ದೇಶನಾಲಯ, 

ಕೊಠಡಿ ಸಂಖ್ಯೆ: 007, ನೆಲ ಮಹಡಿ,
ತಲ್ಕಾಟೋರಾ ಒಳಾಂಗಣ ಕ್ರೀಡಾಂಗಣ, ಅನೆಕ್ಸ್ ಕಟ್ಟಡ,
ನವದೆಹಲಿ -110001

No. of posts:  217

Comments