ಭಾರತೀಯ ಸೇನೆಯಲ್ಲಿ ಖಾಲಿ ಇರುವ ಒಟ್ಟು 194 ಕಿರಿಯ ನಿಯೋಜಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Hanamant Katteppanavar | Date:22 ಜನವರಿ 2021
ಭಾರತೀಯ ಸೇನೆಯಲ್ಲಿ ಖಾಲಿ ಇರುವ ಒಟ್ಟು 194 ಕಿರಿಯ ನಿಯೋಜಿತ ಅಧಿಕಾರಿ (ಧಾರ್ಮಿಕ ಶಿಕ್ಷಕ) ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಅರ್ಜಿ ಪ್ರಕ್ರಿಯೆಯು ಜನವರಿ 11 2021 ರಿಂದ ಆರಂಭಗೊಂಡು ಫೆಬ್ರವರಿ 9, 2021 ರಂದು ಕೊನೆಗೊಳ್ಳಲಿದೆ.
* ಹುದ್ದೆಗಳ ವಿವರ :
- ಪಂಡಿತ್ - 171 ಹುದ್ದೆ
- ಪಂಡಿತ್ (ಗೂರ್ಖಾ) - 09 ಹುದ್ದೆ
- ಗ್ರಂಥಿ - 05 ಹುದ್ದೆ
- ಮೌಲ್ವಿ (ಸುನ್ನಿ) - 05 ಹುದ್ದೆ
- ಮೌಲ್ವಿ (ಶಿಯಾ ) - 01 ಹುದ್ದೆ
- ಪಾದ್ರಿ - 02 ಹುದ್ದೆ
- ಬೌದ್ಧ ಸನ್ಯಾಸಿ (ಮಹಾಯಾನ )- 01 ಹುದ್ದೆ
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ: 194
Comments