'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)' ಬೆಂಗಳೂರು ಸಂಸ್ಥೆಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:7 ಡಿಸೆಂಬರ್ 2021
- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ, ಖಗೋಳಶಾಸ್ತ್ರದಲ್ಲಿ ಸಂಶೋಧನೆಗೆ ಸಮರ್ಪಿಸಲಾಗಿರುವ 'ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA)' ಒಂದು ಸ್ವಾಯತ್ತ ಶೈಕ್ಷಣಿಕ ರಾಷ್ಟ್ರೀಯ ಸಂಸ್ಥೆಯಾಗಿದೆ. ಆಸ್ಟ್ರೋಫಿಸಿಕ್ಸ್ (IIA) ಸಂಸ್ಥೆಯು ತನ್ನ ಮುಖ್ಯ ಕ್ಯಾಂಪಸ್ ಅನ್ನು ಬೆಂಗಳೂರಿನ ಕೋರಮಂಗಲದಲ್ಲಿ ಹೊಂದಿರುವ.ದೇಶದಾದ್ಯಂತ ಕ್ಷೇತ್ರ ಕೇಂದ್ರಗಳು/ಕ್ಯಾಂಪಸ್‌ಗಳನ್ನು ಸಹ ಹೊಂದಿರುವ ಸಂಸ್ಥೆಯಲ್ಲಿ ಮೆಕ್ಯಾನಿಕ್ ಸೇರಿದಂತೆ 13 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ದಿನಾಂಕ : 03/12/2021 ರಂದು ಪ್ರಾರಂಭಗೊಂಡು ಮತ್ತು ದಿನಾಂಕ : 03/01/2021 ರಂದು ಕೊನೆಗೊಳ್ಳುತ್ತದೆ.
- ಹುದ್ದೆಗಳ ವಿವರ :
* ಜೂನಿಯರ್ ತಾಂತ್ರಿಕ ಸಹಾಯಕ - 04
* ಜೂನಿಯರ್ ಸಂಶೋಧನಾ ಸಹಾಯಕ - 06
* ಮೆಕ್ಯಾನಿಕ್ - 01
* ಇಂಜಿನಿಯರ್ ಟ್ರೈನಿ - 01
* ರಿಸರ್ಚ್ ಟ್ರೈನಿ - 01
No. of posts: 13
Comments