Loading..!

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC) ನಲ್ಲಿ ಖಾಲಿ ಇರುವ 739 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:3 ಫೆಬ್ರುವರಿ 2025
not found

ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (CDAC) ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆ ಹೊರಡಿಸಿದೆ. ಭಾರತದೆಲ್ಲೆಡೆ ಖಾಲಿ ಇರುವ ತನ್ನ ವಿವಿಧ ಕೇಂದ್ರಗಳಲ್ಲಿನ ಒಪ್ಪಂದ ಆಧಾರದ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಫೆಬ್ರವರಿ 1, 2025 ರಿಂದ ಫೆಬ್ರವರಿ 20, 2025 ರೊಳಗೆ ಅರ್ಜಿ ಸಲ್ಲಿಸಬಹುದು.


ಹುದ್ದೆಯ ವಿವರ :
- ಹುದ್ದೆಯ ಹೆಸರು : ಪ್ರಾಜೆಕ್ಟ್ ಮ್ಯಾನೇಜರ್, ಪ್ರಾಜೆಕ್ಟ್ ಇಂಜಿನಿಯರ್
- ಒಟ್ಟು ಹುದ್ದೆಗಳು : 739


ಹುದ್ದೆಗಳ ವಿವರ :
ಬೆಂಗಳೂರು - 135
ಚೆನ್ನೈ - 101
ದೆಹಲಿ - 21
ಹೈದರಾಬಾದ್ - 67
ಮೊಹಾಲಿ - 04
ಮುಂಬೈ - 10
ನೊಯಿಡಾ - 173
ಪುಣೆ - 176
ತಿರುವನಂತಪುರಂ - 19
ಸಿಲ್ಚಾರ್ - 34


ಶೈಕ್ಷಣಿಕ ಅರ್ಹತೆ :
CDAC ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ, ಐಟಿಐ, ಡಿಪ್ಲೋಮಾ, BE/B.Tech, ME/M.Tech ಪೂರೈಸಿರಬೇಕು.


ವಯೋಮಿತಿ :
ಅಧಿಕೃತ ಅಧಿಸೂಚನೆಯ ಪ್ರಕಾರ, ಗರಿಷ್ಠ ವಯೋಮಿತಿ 56 ವರ್ಷಗಳಾಗಿದೆ.


ಅರ್ಜಿಶುಲ್ಕ :
CDAC ನೇಮಕಾತಿಗೆ ಯಾವುದೇ ಅರ್ಜಿ ಶುಲ್ಕ ವಿಧಿಸಲಾಗಿಲ್ಲ.


ವೇತನ ಶ್ರೇಣಿ :
ಈ ಹುದ್ದೆಗಳಿಗೆ ಮಾಸಿಕ ವೇತನ 25,000/- ರೂ ಗಳಿಂದ 1,83,000/- ರೂ ಗಳ ವರೆಗೆ ನಿಗದಿಪಡಿಸಲಾಗಿದೆ.


ಆಯ್ಕೆ ಪ್ರಕ್ರಿಯೆ :
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.


ಅರ್ಜಿ ಸಲ್ಲಿಸುವ ದಿನಾಂಕಗಳು :
- ಪ್ರಾರಂಭ ದಿನಾಂಕ : 01-02-2025
- ಕೊನೆಯ ದಿನಾಂಕ : 20-02-2025


ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗಾಗಿ ಆದಷ್ಟು ಶೀಘ್ರ ಅರ್ಜಿ ಸಲ್ಲಿಸಿ ಮತ್ತು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. 

ಈ ಕುರಿತು ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ..

Comments