Loading..!

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Published by: Surekha Halli | Date:4 ಆಗಸ್ಟ್ 2020
not found
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೋರೋಣ ವೈರಸ್ ನಿಯಂತ್ರಣಕ್ಕೆ ಅವಶ್ಯವಿರುವ ಹೆಚ್ಚುವರಿ ಮಾನವ ಸಂಪನ್ಮೂಲಗಳನ್ನು ತಾತ್ಕಾಲಿಕವಾಗಿ 06 ತಿಂಗಳ ಅವಧಿಗೆ ಗುತ್ತಿಗೆ ಆದರದ ಮೇಲೆ ನೇರ ಸಂದರ್ಶನ ಪ್ರಕ್ರಿಯೆ ಮೂಲಕ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

* ಹುದ್ದೆಗಳ ವಿವರ :
- ಸ್ತ್ರೀ ರೋಗ ತಜ್ಞರು
- ಮಕ್ಕಳ ತಜ್ಞರು
- ಅರವಳಿಕೆ ತಜ್ಞರು
- ಜನರಲ್ ಫಿಸಿಷಿಯನ್
- ಎಂ.ಬಿ.ಬಿ.ಎಸ್ ವೈದ್ಯರುಗಳು
- ಸ್ಟಾಪ್ ನರ್ಸ್
- ಪ್ಯಾರಾ ಮೆಡಿಕಲ್ ಸಿಬ್ಬಂದಿಗಳು

ಆಸಕ್ತರು ಸಂಬಂದಿಸಿದ ದಾಖಲೆಗಳೊಂದಿಗೆ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೂಚಿಸಿರುವ ಸ್ಥಳ ಮತ್ತು ದಿನಾಂಕದಂದು ನೇರ ಸಂದರ್ಶನ ಪ್ರಕ್ರಿಯೆಗೆ ಹಾಜರಾಗಲು ಸೂಚಿಸಲಾಗಿದೆ. ಮೇಲ್ಕಂಡ ಹುದ್ದೆಗಳ ಸಂಖ್ಯೆಗಳನ್ನು ಹೆಚ್ಚಿಸುವ / ಕಡಿತಗೊಳಿಸುವ ಅಧಿಕಾರವನ್ನು ಆಯುಕ್ತರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರು ಹೊಂದಿರುತ್ತಾರೆ.

** ಈ ಹುದ್ದೆಗಳ ನೇಮಕಾತಿಗಾಗಿ ಈಗಾಗಲೇ ಸಂದರ್ಶನ ಪ್ರಕ್ರಿಯೆ ಚಲನೆಯಲ್ಲಿದ್ದು ದಿನಾಂಕ 06 ಆಗಸ್ಟ್ 2020 ರ ವರೆಗೆ ನಡೆಯಲಿದೆ

- ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.
No. of posts:  329

Comments