Loading..!

ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | SSLC ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
Tags: Degree SSLC
Published by: Yallamma G | Date:5 ಫೆಬ್ರುವರಿ 2025
not found

ಕೇಂದ್ರ ನಾಗರೀಕ ವಿಮಾನಯಾನ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ  ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾದಲ್ಲಿ ಖಾಲಿ ಇರುವ224 ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟಂಟ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಗಳು ಚಂಡೀಗಢ್, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಮಧ್ಯ ಪ್ರದೇಶ, ಪಂಜಾಬ್, ರಾಜಸ್ಥಾನ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಲಭ್ಯವಿವೆ. 


ಹುದ್ದೆಗಳ ವಿವರ :
Senior Assistant (Official Language) : 4
Senior Assistant (Accounts) : 21
Senior Assistant (Electronics) : 47
Junior Assistant (Fire Service) : 152

ಅರ್ಹತಾ ಮಾನದಂಡ:
ಹಿರಿಯ ಸಹಾಯಕ (ಅಧಿಕೃತ ಭಾಷೆ): ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಸಮಾನವಾದುದು, ಮತ್ತು 2 ವರ್ಷಗಳ ವೃತ್ತಿ ಅನುಭವ.
ಹಿರಿಯ ಸಹಾಯಕ (ಖಾತೆಗಳು): ಬಿ.ಕಾಂ ಪದವಿ, ಕಂಪ್ಯೂಟರ್ ಪ್ರಾವೀಣ್ಯತೆ ಮತ್ತು 2 ವರ್ಷಗಳ ವೃತ್ತಿ ಅನುಭವ.
ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): ಲೆಕ್ಟ್ರಾನಿಕ್ಸ್/ಟೆಲಿಕಮ್ಯುನಿಕೇಶನ್/ರೇಡಿಯೋ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಮತ್ತು 2 ವರ್ಷಗಳ ವೃತ್ತಿ ಅನುಭವ.
ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ): 10ನೇ ತರಗತಿ + ಮೆಕ್ಯಾನಿಕಲ್/ಆಟೋಮೊಬೈಲ್/ಫೈರ್‌ನಲ್ಲಿ ಡಿಪ್ಲೊಮಾ ಅಥವಾ 12ನೇ ತರಗತಿ ಉತ್ತೀರ್ಣ ಮತ್ತು ಮಾನ್ಯತೆಯಿರುವ ಚಾಲನಾ ಪರವಾನಗಿ ಪಡೆದಿರಬೇಕು.


ಮಾಸಿಕ ವೇತನ :
Senior Assistant (Official Language), Senior Assistant (Accounts) ಮತ್ತು Senior Assistant (Electronics) ಹುದ್ದೆಗಳಿಗೆ : Rs.36000-110000/-
Junior Assistant (Fire Service) ಹುದ್ದೆಗಳಿಗೆ : Rs.31000-92000/- 


ವಯೋಮಿತಿ : 30 ವರ್ಷಗಳು (ನಿಯಮಾನುಸಾರ ವಯೋಸಡಿಲಿಕೆ ಲಭ್ಯ).


ಆಯ್ಕೆ ಪ್ರಕ್ರಿಯೆ : 
- ಹಿರಿಯ ಸಹಾಯಕ (ಅಧಿಕೃತ ಭಾಷೆ ಮತ್ತು ಖಾತೆಗಳು): ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕಂಪ್ಯೂಟರ್ ಲಿಟರಸಿ ಟೆಸ್ಟ್, ಮತ್ತು ದಾಖಲೆ ಪರಿಶೀಲನೆ.
- ಹಿರಿಯ ಸಹಾಯಕ (ಎಲೆಕ್ಟ್ರಾನಿಕ್ಸ್): ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಮತ್ತು ದಾಖಲೆ ಪರಿಶೀಲನೆ.
- ಕಿರಿಯ ಸಹಾಯಕ (ಅಗ್ನಿಶಾಮಕ ಸೇವೆ): ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಮಾಪನ ಮತ್ತು ವೈದ್ಯಕೀಯ ಪರೀಕ್ಷೆ, ಚಾಲನಾ ಪರೀಕ್ಷೆ, ದೈಹಿಕ ಸಹನಶೀಲತೆ ಪರೀಕ್ಷೆ (PET), ಮತ್ತು ದಾಖಲೆ ಪರಿಶೀಲನೆ.


ಅರ್ಜಿಯ ಶುಲ್ಕ:
ಸಾಮಾನ್ಯ/OBC/EWS: ರೂ. 1000/-
SC/ST/PwBD/ಮಹಿಳಾ ಅಭ್ಯರ್ಥಿಗಳು: ಶುಲ್ಕದಿಂದ ವಿನಾಯಿತಿ


ಅರ್ಜಿಯ ವಿಧಾನ:
ಆಸಕ್ತ ಅಭ್ಯರ್ಥಿಗಳು AAI ನ ಅಧಿಕೃತ ವೆಬ್‌ಸೈಟ್ [www.aai.aero](https://www.aai.aero/) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ: 5 ಮಾರ್ಚ್ 2025.

Comments