Loading..!

RRB NTPC ಹುದ್ದೆಗಳ ನೇಮಕ ವಿವರ: ಸಿಬಿಟಿ 1 ಪರೀಕ್ಷೆಯ ಫಲಿತಾಂಶ ದಿನಾಂಕ ಮತ್ತು ಸಿಬಿಟಿ 2 ಪರೀಕ್ಷೆಯ ವೇಳಾಪಟ್ಟಿ ಪ್ರಕಟ
Published by: Savita Halli | Date:8 ಡಿಸೆಂಬರ್ 2021
Image not found

 ರೈಲ್ವೆ ನೇಮಕಾತಿ ಮಂಡಳಿಯು NTPC  ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) - 1 ಫಲಿತಾಂಶ ದಿನಾಂಕ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) - 2 ವೇಳಾಪಟ್ಟಿ ಕುರಿತು ಪ್ರಕಟಣೆ ಹೊರಡಿಸಿದೆ. 


 ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆ ಸಂಖ್ಯೆ CEN 01/2019 ಯ NTPC ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ,  ಪ್ರಮುಖ ಪ್ರಕಟಣೆಯೊಂದನ್ನು ಇದೀಗ ಬಿಡುಗಡೆ ಮಾಡಿದೆ.
- ಭಾರತ ಸರ್ಕಾರದ ರೈಲ್ವೆ ಸಚಿವಾಲಯವು 2019 ಜನೆವರಿ ತಿಂಗಳಿನಲ್ಲಿ ದೇಶಾದ್ಯಂತ ಖಾಲಿ ಇರುವ NTPC ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
- RRB NTPC ಸ್ಟೇಜ್ 1 ಕಂಪ್ಯೂಟರ್ ಬೇಸ್ಡ್‌ ಟೆಸ್ಟ್‌ (CBT-1) ಅನ್ನು 28 / 12 / 2020 ರಿಂದ 31 / 07 / 2021  ರವರೆಗೆ 7 ಹಂತಗಳಲ್ಲಿ ನಡೆಸಲಾಗಿತ್ತು.
- ಪರೀಕ್ಷೆ ಬರೆದ ಅಭ್ಯರ್ಥಿಗಳ ಫಲಿತಾಂಶ ಪ್ರಕ್ರಿಯೆಗೆ ಸಿದ್ಧತೆಯು  ನಡೆಯುತ್ತಿದ್ದು, RRB'ಯು 15  / 01 / 2022 ರೊಳಗೆ ಬಿಡುಗಡೆ ಮಾಡಲಿದೆ ಎಂದು ತಿಳಿಸಲಾಗಿದೆ.


CBT-1 ನಲ್ಲಿ ಶಾರ್ಟ್‌ಲಿಸ್ಟ್‌ ಆದ ಅಭ್ಯರ್ಥಿಗಳಿಗೆ NTPC CBT-2 ಪರೀಕ್ಷೆಯನ್ನು 2022 ರ ಫೆಬ್ರುವರಿ 14-18 ರವರೆಗೆ ನಡೆಸಲು ಉದ್ದೇಶಿಸಲಾಗಿದೆ. ಈ  ವೇಳಾಪಟ್ಟಿಯು ಭಾರತ ಸರ್ಕಾರದ ಆದೇಶಗಳಿಗೆ, ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ ಎಂದು ಆರ್‌ಆರ್‌ಬಿ ಯು ತನ್ನ ಪ್ರಕಟಣೆಯಲ್ಲಿ ಹೇಳಿದೆ.


 

Comments