ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿನ ಸಹಾಯಕ ನಿಯಂತ್ರಕರು ಮತ್ತು ಲೆಕ್ಕ ಪರಿಶೋಧನಾಧಿಕಾರಿ (ಹೈದರಾಬಾದ್ ಕರ್ನಾಟಕ ವೃಂದದ 15 ಮತ್ತು ಉಳಿಕೆ ಮೂಲವೃಂದದ 97) ಹುದ್ದೆಗಳ ನೇಮಕಾತಿಗಾಗಿ 01/03/2024 ರಂದು ಅಧಿಸೂಚನೆಯನ್ನು ಹೊರಡಿಸಿಲಾಗಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ನೇಮಕಾತಿಯ ಮೊದಲನೇ ಹಂತವಾಗಿ ಪೂರ್ವಭಾವಿ (Preliminary) ಪರೀಕ್ಷೆನ್ನು ನಡೆಸಲು KPSC ಯು ಇದೀಗ ಪರೀಕ್ಷಯ ದಿನಾಂಕವನ್ನು ಪ್ರಕಟಿಸಿದೆ. ಹೈದರಾಬಾದ್ ಕರ್ನಾಟಕ ವೃಂದದ 15 ಹುದ್ದೆಗಳನ್ನು ದಿನಾಂಕ 28/07/2024 ಮತ್ತು ಉಳಿಕೆ ಮೂಲವೃಂದದ 97 ಹುದ್ದೆಗಳನ್ನು 07/07/2024 ರಂದು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
- ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಇಲಾಖಾ ಜಾಲತಾಣಕ್ಕೆ ಭೇಟಿ ನೀಡಿ ಈ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
Comments