KPSC ಯಿಂದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿನ ನಗರ ಯೋಜಕರು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಹೆಚ್ಚುವರಿ ಆಯ್ಕೆಪಟ್ಟಿ ಇದೀಗ ಪ್ರಕಟ
Published by: Bhagya R K | Date:25 ಮಾರ್ಚ್ 2025
Image not found

ಕರ್ನಾಟಕ ಲೋಕಸೇವಾ ಆಯೋಗವು (KPSC) ದಿನಾಂಕ: 24.08.2022 ರಂದು ಅಧಿಸೂಚಿಸಿದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯಲ್ಲಿ 18+5 (ಹೈ.ಕ) ನಗರ ಯೋಜಕರು (Town Planner) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ) (ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮ 2022ರನ್ವಯ ತಿದ್ದುಪಡಿ ಪಟ್ಟಿಗಳನ್ನು ಸಿದ್ಧಪಡಿಸಲಾಗಿದ್ದು, ಈಗ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.


ಅಧಿಸೂಚನೆ ವಿವರಗಳು :
- ಅಧಿಸೂಚನೆ ಸಂಖ್ಯೆ : ಪಿಎಸ್‌ಸಿ 1 ಆರ್‌ಟಿಬಿ-3/2021
- ಅಧಿಸೂಚನೆ ದಿನಾಂಕ : 18-03-2022
- ತಿದ್ದುಪಡಿ ಅಧಿಸೂಚನೆ ದಿನಾಂಕ : 24-08-2022
- ಅಂತಿಮ ಆಯ್ಕೆಪಟ್ಟಿ ಪ್ರಕಟಣೆ : 31-01-2024 ಮತ್ತು 16-04-2024
- ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಣೆ : 20-01-2025


ಹುದ್ದೆಯ ವಿವರ :
- ಹುದ್ದೆಯ ಹೆಸರು : ನಗರ ಯೋಜಕರು
- ಹುದ್ದೆಗಳ ಸಂಖ್ಯೆ : 18+05 (ಹೈ.ಕ)
- ನೇಮಕಾತಿ ಪ್ರಾಧಿಕಾರ : ನಿರ್ದೇಶಕರು
- ಇಲಾಖೆ : ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ


ಅಯ್ಕೆಯ ವಿವರ:
ಕರ್ನಾಟಕ ನಾಗರೀಕ ಸೇವಾ (ನೇರ ನೇಮಕಾತಿ)(ಸಾಮಾನ್ಯ) ನಿಯಮಗಳು 2021 ಮತ್ತು ತಿದ್ದುಪಡಿ ನಿಯಮಗಳು 2022ರ ಅನ್ವಯ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.


ಹೆಚ್ಚುವರಿ ಆಯ್ಕೆ ಪಟ್ಟಿಯ ಉದ್ದೇಶ :
ಈಗಾಗಲೇ ಪ್ರಕಟಿತ ಅಂತಿಮ ಆಯ್ಕೆಪಟ್ಟಿಯ ಆಧಾರದ ಮೇಲೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದ ಹುದ್ದೆಗಳ ಸ್ಥಾನಕ್ಕೆ ಸೀಮಿತಗೊಳಿಸಿ ಈ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.


ಮಾಹಿತಿ ಅಧಿಸೂಚನೆ :
ಅಭ್ಯರ್ಥಿಗಳು ಹೆಚ್ಚುವರಿ ಆಯ್ಕೆಪಟ್ಟಿಯ ಮಾಹಿತಿಗಾಗಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಸಂಬಂಧಿತ ಇಲಾಖೆ ಕಚೇರಿಯನ್ನು ಸಂಪರ್ಕಿಸಬಹುದು.


ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು ಮತ್ತು ತಮ್ಮ ಸೇವಾ ಜೀವನವನ್ನು ಕರ್ನಾಟಕ ನಗರ ಯೋಜನಾ ಇಲಾಖೆಯೊಂದಿಗೆ ಆರಂಭಿಸಬಹುದು!

Comments

*