ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲು ಜಾರಿಗೆ ಬರುವವರೆಗೆ ಯಾವುದೇ ಹೊಸ ನೇಮಕಾತಿ ನಡೆಸುವುದಿಲ್ಲ ಎಂದು ರಾಜ್ಯ ಸರಕಾರ ಪುನರ್ ಸುತ್ತೋಲೆ ಹೊರಡಿಸಿದೆ. 'ಮೀಸಲಾತಿ ಅನ್ವಯವಾಗುವ ವೃಂದಗಳಲ್ಲಿನ ಹುದ್ದೆಗಳಿಗೆ ಹೊಸತಾಗಿ ನೇಮಕಾತಿಗೆ ಅಧಿಸೂಚನೆ ಹೊರಡಿಸದಂತೆ 2024ರ ನ. 25ರಂದು ಸುತ್ತೋಲೆ ಹೊರಡಿಸಿದ್ದರೂ ಕೆಲವು ನೇಮಕಾತಿ ಪ್ರಾಧಿಕಾರಗಳು ಈ ಸೂಚನೆಯನ್ನು ಉಲ್ಲಂಘಿಸುತ್ತಿವೆ. ಹೀಗೆ, ನಿಯಮ ಉಲ್ಲಂಘಿಸಿ ಹೊಸ ಅಧಿಸೂಚನೆ ಹೊರಡಿಸುವ ನೇಮಕಾತಿ ಪ್ರಾಧಿಕಾರಗಳ ವಿರುದ್ಧ ಆಡಳಿತ ಇಲಾಖೆಗಳ ಕಾರ್ಯದರ್ಶಿಗಳು ಶಿಸ್ತು ಕ್ರಮ ತೆಗೆದುಕೊಳ್ಳಬೇಕು' ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ 'ಇಲಾಖೆ (ಡಿಪಿಎಆರ್) ಸೂಚನೆ ನೀಡಿದೆ.
'ಸುತ್ತೋಲೆಯನ್ನು ಉಲ್ಲಂಘಿಸಿ ಕೆಲವು ನೇಮಕಾತಿ ಪ್ರಾಧಿಕಾರಗಳು ಅಧಿ ಸೂಚನೆ ಹೊರಡಿಸಿರುವುದು ಗಮನಕ್ಕೆ ಬಂದಿದೆ. ಈ ರೀತಿ ಅಧಿಸೂಚನೆಗಳನ್ನು ಹೊರಡಿಸಿದ್ದರೆ ತಕ್ಷಣ ರದ್ದುಪಡಿಸಬೇಕು. ಸುತ್ತೋಲೆಯಲ್ಲಿರುವ ಸೂಚನೆಯನ್ನು ಎಲ್ಲ ನೇಮಕಾತಿ ಪ್ರಾಧಿಕಾರಗಳು ಕಟ್ಟುನಿಟ್ಟಾಗಿ ಪಾಲಿಸಬೇಕು' ಎಂದು ಡಿಪಿಎಆರ್ ಉಪ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ.
Comments