ರಾಜ್ಯದ ವಿವಿಧ ಸರ್ಕಾರಿ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಸುವ ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಗಳ ಹುದ್ದೆಗಳ ಹೆಚ್ಚುವರಿ ಆಯ್ಕೆ ಪಟ್ಟಿ ಹಾಗೂ ಕಟ್‌ಆಫ್ ಅಂಕಗಳುನ್ನು ಪ್ರಕಟಿಸಿದೆ.
*ಪ್ರಥಮ ದರ್ಜೆ ಸಹಾಯಕ ಹುದ್ದೆ: ಕರ್ನಾಟಕ ಲೋಕಸೇವಾ ಆಯೋಗದ ಅಧಿಸೂಚನೆ ದಿನಾಂಕ : 01-09-2017 ಮತ್ತು ಸೇರ್ಪಡೆ ಅಧಿಸೂಚನೆ ದಿನಾಂಕ 24-11-2017ರಲ್ಲಿ ಅಧಿಸೂಚಿಸಲಾದ ಪ್ರಥಮ ದರ್ಜೆ ಸಹಾಯಕರ ಒಟ್ಟು 960 ( 810 + 150ಹೈಕ ) ಹುದ್ದೆಗಳಿಗೆ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಪ್ರಥಮ ದರ್ಜೆ ಸಹಾಯಕರು, 960 (810+150) ಹುದ್ದೆಗಳ ಕಟ್ ಆಫ್ ಅಂಕಗಳನ್ನು ಇಲಾಖೆಯು ಇದೀಗ ಪ್ರಕಟಿಸಲಾಗಿದೆ.
* ವಿವಿಧ ನ್ಯಾಯಾಂಗದ ಹುದ್ದೆ: ವಿವಿಧ ನ್ಯಾಯಾಂಗ ಘಟಕಗಳಲ್ಲಿನ ಉಳಿಕೆ ಮೂಲ ವೃಂದದ ಪ್ರಥಮ ದರ್ಜೆ ಸಹಾಯಕರ ಒಟ್ಟು 219 ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು 01 / 12 / 2020 ರಂದು ಪ್ರಕಟಿಸಲಾಗಿತ್ತು. ಈಗ ಹೆಚ್ಚುವರಿ ಆಯ್ಕೆಪಟ್ಟಿಯನ್ನು ಪ್ರಕಟಿಸಲಾಗಿದೆ.
* ವಸತಿ ನಿಲಯ ಮೇಲ್ವಿಚಾರಕ ಹುದ್ದೆ: ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಮೆಟ್ರಿಕ್ ಪೂರ್ವ ವಸತಿ ನಿಲಯ ಮೇಲ್ವಿಚಾರಕರ ( ಪುರುಷ ) 4 ಹುದ್ದೆಗಳನ್ನು ಹೊರತುಪಡಿಸಿ ಈಗ ಹೆಚ್ಚುವರಿ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
* ಸಹಾಯಕ ತೋಟಗಾರಿಕೆ ಅಧಿಕಾರಿ: ತೋಟಗಾರಿಕೆ ಇಲಾಖೆಯಲ್ಲಿನ ಸಹಾಯಕ ತೋಟಗಾರಿಕೆ ಅಧಿಕಾರಿ 221 ಹುದ್ದೆಗಳಿಗೆ 2021 ರ ಜನವರಿ .19 ರಂದು ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಈಗ 20 ಸ್ಥಾನಗಳಿಗೆ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟಿಸಲಾಗಿದೆ.
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ ಲೋಡ್ ಮಾಡಿಕೊಂಡು ಕಟ್ ಆಫ್ ಅಂಕಗಳನ್ನು ನೋಡಬಹುದು.
https://kpsc.kar.nic.in/
Comments