➤ ಈ ಯೋಜನೆಯ ಪ್ರಮುಖ ಅಂಶಗಳು ಹಾಗೂ ಉದ್ದೇಶಗಳು:
- ಮಾಸಿಕ ಆಧಾರದಲ್ಲಿ ವಿದ್ಯಾರ್ಥಿವೇತನ (Monthly Disbursement): ಸಾಂಪ್ರದಾಯಿಕ ವಿಧಾನದಲ್ಲಿ ವಿದ್ಯಾರ್ಥಿವೇತನ ತಲುಪಲು ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು, ಇನ್ಮುಂದೆ ಪ್ರತಿ ತಿಂಗಳು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ವಿದ್ಯಾರ್ಥಿವೇತನ ಜಮೆಯಾಗಲಿದೆ.
- ಪಾರದರ್ಶಕತೆ ಮತ್ತು ವೇಗ: NSP ಮತ್ತು DBT ತಂತ್ರಜ್ಞಾನದ ಬಳಕೆಯಿಂದ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ವ್ಯವಸ್ಥೆಯು ಹೆಚ್ಚು ಪಾರದರ್ಶಕ, ಸುಲಭ ಹಾಗೂ ಶೀಘ್ರವಾಗಲಿದೆ.
- ಪ್ರಾಯೋಗಿಕ ತರಬೇತಿಗೆ ಆದ್ಯತೆ: ಕೃಷಿ ಶಿಕ್ಷಣದಲ್ಲಿ ಸೈದ್ಧಾಂತಿಕ ಕಲಿವಿನ ಜೊತೆಗೆ ಪ್ರಾಯೋಗಿಕ ತರಬೇತಿ (Practical Training) ಮತ್ತು ಸಂಶೋಧನೆ ಅತ್ಯಗತ್ಯ. ಸಮಯಕ್ಕೆ ಸರಿಯಾಗಿ ಆರ್ಥಿಕ ನೆರವು ಸಿಗುವುದರಿಂದ ವಿದ್ಯಾರ್ಥಿಗಳು ತಮ್ಮ ಅಧ್ಯಯನ ಮತ್ತು ಸಂಶೋಧನೆಯತ್ತ ಹೆಚ್ಚಿನ ಗಮನ ಹರಿಸಬಹುದು ಎಂದು ಸಚಿವರು ತಿಳಿಸಿದರು.