➤ 2026 ಸೆಪ್ಟೆಂಬರ್ 2 ರಂದು ನವದೆಹಲಿಯಲ್ಲಿ "ಟೈಗರ್ ಲ್ಯಾಂಡ್‌ಸ್ಕೇಪ್ಸ್: ಕನ್ಸರ್ವೇಶನ್, ಬಯೋಎಕಾನಮಿ ಅಂಡ್ ಇಕೋ-ಟೂರಿಸಂ ಫಾರ್ ಲೈವ್ಲಿಹುಡ್ ಅಂಡ್ ಇನ್‌ಕಮ್ ಜನರೇಷನ್" (Tiger Landscapes: Conservation, Bioeconomy and Ecotourism for Livelihood and Income Generation) ಎಂಬ ವಿಷಯದ ಅಡಿಯಲ್ಲಿ 2 ದಿನಗಳ ಅಂತರರಾಷ್ಟ್ರೀಯ ಕಾರ್ಯಾಗಾರವನ್ನು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದ್ರ ಯಾದವ್ ಉದ್ಘಾಟಿಸಿದರು
- ಕಾರ್ಯಾಗಾರ ನೆರವೇರಿದ ದಿನಾಂಕ: ಸೆಪ್ಟೆಂಬರ್ 2–3, 2026 ಸ್ಥಳ: ನವದೆಹಲಿ
- ಆಯೋಜಕ ಸಂಸ್ಥೆಗಳು: ಇಂಟರ್ನ್ಯಾಷನಲ್ ಬಿಗ್ ಕ್ಯಾಟ್ ಅಲೈಯನ್ಸ್ (IBCA), ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (ADB) ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (NTCA).
- ಮುಖ್ಯ ಒಪ್ಪಂದ (MoU): IBCA ಮತ್ತು ADB ನಡುವೆ ಲ್ಯಾಂಡ್‌ಸ್ಕೇಪ್ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ 'ನೇಚರ್-ಪಾಸಿಟಿವ್ ಫೈನಾನ್ಸಿಂಗ್' (Nature-Positive Financing) ಸಂಬಂಧಿತ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಯಿತು.
- ಭಾಗವಹಿಸಿದ ಪ್ರಮುಖ ದೇಶಗಳು: ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಮಲೇಷ್ಯಾ, ನೇಪಾಳ ಮತ್ತು ವಿಯೆಟ್ನಾಂ.
➤ ಕಾರ್ಯಾಗಾರದ ಪ್ರಮುಖ ಉದ್ದೇಶಗಳು:
- ನೈಸರ್ಗಿಕ ಬಂಡವಾಳವಾಗಿ ಹುಲಿ ಭೂದೃಶ್ಯ: ಹುಲಿಗಳು ವಾಸಿಸುವ ಅರಣ್ಯ ಪ್ರದೇಶಗಳನ್ನು ಬರಿ ವನ್ಯಜೀವಿ ತಾಣವಾಗಿ ನೋಡದೆ, ಅವುಗಳನ್ನು ನೀರಿನ ಭದ್ರತೆ, ಕಾರ್ಬನ್ ಗ್ರಹಿಕೆ (Carbon Sequestration) ಮತ್ತು ಹವಾಮಾನ ನಿಯಂತ್ರಣ ನೀಡುವ 'ನೈಸರ್ಗಿಕ ಬಂಡವಾಳ' (Natural Capital) ಎಂದು ಗುರುತಿಸುವುದು.
- ಮಾನವ-ಪ್ರಕೃತಿ ಸಹಬಾಳ್ವೆ: ಪರಿಸರ ಸಂರಕ್ಷಣೆಯು "ಮಾನವ ಮತ್ತು ಪ್ರಕೃತಿಯ ಸಾಮರಸ್ಯ ಹಾಗೂ ಸಹಬಾಳ್ವೆ" (Human-Nature Coexistence) ಆಧಾರದ ಮೇಲೆ ಸಾಗಬೇಕು ಎಂದು ಒತ್ತಿಹೇಳಲಾಯಿತು.
- ಸಾಂಪ್ರದಾಯಿಕ ಜ್ಞಾನದ ಬಳಕೆ: ಸ್ಥಳೀಯ ಬುಡಕಟ್ಟು ಹಾಗೂ ಗ್ರಾಮೀಣ ಸಮುದಾಯಗಳ ಸಾಂಪ್ರದಾಯಿಕ ಜ್ಞಾನವನ್ನು (Traditional/Native Knowledge) ಪರಿಸರ ನೀತಿ ರಚನೆಯಲ್ಲಿ ಅಳವಡಿಸಿಕೊಳ್ಳುವುದು.
ಬುಧವಾರ, 02 ಸೆಪ್ಟೆಂಬರ್ 2026
2:35 ಅಪರಾಹ್ನ
Daily PDF
ಅಂತರರಾಷ್ಟ್ರೀಯ ಹುಲಿ ಭೂದೃಶ್ಯ ಕಾರ್ಯಾಗಾರ 2026
Authored by:
Akshata Halli