ಸೋಮವಾರ, 06 ಜನವರಿ 2020
5:30 ಪೂರ್ವಾಹ್ನ
Daily PDF
ರಣಜಿ ಟ್ರೋಫಿ ಇತಿಹಾಸದಲ್ಲಿ ಕರ್ನಾಟಕಕ್ಕೆ 200ನೇ ಗೆಲುವು; ದಾಖಲೆ ಬರೆದ ರಾಜ್ಯ ತಂಡ!
Authored by:
Basavaraj Halli
ಬೆಂಗಳೂರು: ರಣಜಿ ಟ್ರೋಫಿಯ ಮುಂಬೈ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ತಂಡ ಆಲ್ರೌಂಡರ್ ಪ್ರದರ್ಶನ ನೀಡಿ 5 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಬಿ ಗುಂಪಿನಲ್ಲಿ ಕರುಣ್ ನಾಯರ್ ಪಡೆ ತನ್ನ ಎರಡನೇ ಗೆಲುವು ದಾಖಲಿಸಿದೆ.
ಕರ್ನಾಟಕ ತಂಡ ಅಮೋಘ ವಿಜಯಿಯಾಗುತ್ತಿದ್ದಂತೆ ರಣಜಿ ಕ್ರಿಕೆಟ್ ಇತಿಹಾಸದಲ್ಲಿ 200ನೇ ಜಯ ಸಾಧಿಸಿ ಹೊಸ ಮೈಲುಗಲ್ಲು ತಲುಪಿದೆ. ಅಷ್ಟೇ ಅಲ್ಲದೆ ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಅತೀ ಹೆಚ್ಚು ಜಯ ಸಾಧಿಸಿದ ಎರಡನೇ ತಂಡವಾಗಿ ದಾಖಲೆ ಬರೆದಿದೆ.