* ಭಾರತದ ಹಸಿರು ಕ್ರಾಂತಿಯ ಪಿತಾಮಹ, ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಇನ್ನಿತರ ಪ್ರಶಸ್ತಿ ಗೌರವ ಪಡೆದುಕೊಂಡ ಡಾ. ಎಂ ಎಸ್ ಸ್ವಾಮಿನಾಥನ್ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು ಸೆಪ್ಟೆಂಬರ್ 27 ರಂದು ಚನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.
1925 ಆ.7ರಂದು ತಮಿಳುನಾಡಿನ ತಂಭಾರತದ ವೂರಿನಲ್ಲಿ ಜನಿಸಿದ್ದ ಎಂಎಸ್ ಸ್ವಾಮೀನಾಥನ್ ಅವರು ಓರ್ವ ಕೃಷಿ ವಿಜ್ಞಾನಿಯಾಗಿ, ಸಸ್ಯ ಶಾಸ್ತ್ರಜ್ಞರಾಗಿ, ಭಾರತದ ಕೃಷಿ ಬೆಳವಣಿಗೆ ರೈತರ ತಳ ಆದಾಯ ಹೆಚ್ಚಳ, ಭತ್ತದ ತಳಿಗಳ ಅಭಿವೃದ್ಧಿ ಸೇರಿದಂತೆ ಕೃಷಿ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ. ಅದಕ್ಕಾಗಿ ಅವರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯಲಾಗುತ್ತಿತ್ತು.
* ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದಿಂದ “ಆರ್ಥಿಕ ಪರಿಸರ ವಿಜ್ಞಾನದ ಪಿತಾಮಹ” ಎಂದು ಕರೆಯಲ್ಪಟ್ಟಿದ ಎಂ.ಎಸ್. ಸ್ವಾಮಿನಾಥನ್ ಅವರ ಅದ್ಭುತ ಕೆಲಸವು 1960 ಮತ್ತು 1970ರ ದಶಕದಲ್ಲಿ ಭಾರತದಲ್ಲಿ ಕೃಷಿಯಲ್ಲಿ ಕ್ರಾಂತಿಗೆ ಕಾರಣವಾಯಿತು.
* ಕೃಷಿ ಕ್ಷೇತ್ರಕ್ಕೆ ಎಂ.ಎಸ್. ಸ್ವಾಮಿನಾಥನ್ ಅವರ ಕೊಡುಗೆಗಳನ್ನು ಗುರುತಿಸಿ 1987 ರಲ್ಲಿ ಮೊದಲ ವಿಶ್ವ ಆಹಾರ ಪ್ರಶಸ್ತಿಯನ್ನು ನೀಡಲಾಯಿತು.
* 2004ರಲ್ಲಿ, ಎಂ.ಎಸ್. ಸ್ವಾಮಿನಾಥನ್ ಅವರನ್ನು ರೈತರ ಕುರಿತ ರಾಷ್ಟ್ರೀಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.
* ಡಾ. ಸ್ವಾಮಿನಾಥನ್ ಅವರು 1990 ರ ವರ್ಷದಲ್ಲಿ ಎಂ. ಎಸ್. ಸ್ವಾಮಿನಾಥನ್ ರಿಸರ್ಚ್ ಫೌಂಡೆಶನ್ ಸಂಸ್ಥೆಯನ್ನು ಚೆನ್ನೈನಲ್ಲಿ ಸ್ಥಾಪಿಸಿ ಕೃಷಿಕ್ಷೇತ್ರದಲ್ಲಿನ ತಮ್ಮ ಕೊಡುಗೆಯನ್ನು ನಿರಂತರವಾಗಿ ಮುಂದುವರೆಸಿದ್ದರು.
ಪ್ರಮುಖ ಪ್ರಶಸ್ತಿ ಗೌರವಗಳು :
1971ರಲ್ಲಿ ಅವರಿಗೆ ಮ್ಯಾಗ್ಸೇಸೆ ಪ್ರಶಸ್ತಿ ಭಾರತ ಸರ್ಕಾರದ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಪುರಸ್ಕಾರದಂತಹ ಮಹತ್ವದ ಪ್ರಶಸ್ತಿಗಳೆಲ್ಲವೂ ಅವರಿಗೆ ಸಂದಿವೆ.
1986ರ ವರ್ಷದಲ್ಲಿ ಅವರಿಗೆ ಆಲ್ಬರ್ಟ್ ಐನ್ಸ್ಟೀನ್ ಪ್ರಶಸ್ತಿ
1987ರಲ್ಲಿ ಪ್ರಥಮ ವಿಶ್ವ ಆಹಾರ ಪ್ರಶಸ್ತಿಗಳ ಗೌರವ
1991ರಲ್ಲಿ ಅವರಿಗೆ ಅಮೆರಿಕದ ಟೈಲರ್ ಪುರಸ್ಕಾರ
1999ರ ವರ್ಷದಲ್ಲಿ ಯುನೆಸ್ಕೋದ ಗಾಂ ಸ್ವರ್ಣ ಪುರಸ್ಕಾರ
ಗುರುವಾರ, 28 ಸೆಪ್ಟೆಂಬರ್ 2023
9:56 ಅಪರಾಹ್ನ
Daily PDF
ಭಾರತದ ಹಸಿರು ಕ್ರಾಂತಿ ಪಿತಾಮಹ ಎಂದೇ ಪ್ರಖ್ಯಾತಿ ಪಡೆದ ಕೃಷಿ ವಿಜ್ಞಾನಿ ಡಾ. ಎಂ ಎಸ್ ಸ್ವಾಮಿನಾಥನ್ ನಿಧನ
Authored by:
Akshata Halli