ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಪೋಷಣ್ ಅಭಿಯಾನ ಯೋಜನೆಯಡಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳು ತಾತ್ಕಾಲಿಕ ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಬಹುದು.
ಹುದ್ದೆಗಳ ವಿವರ :
1. ಸಲಹೆಗಾರರು (ಯೋಜನೆ, ಮೇಲ್ವಿಚಾರಣೆ ಮತ್ತು ಮಾಲ್ಯಮಾನವ) :
- ಹುದ್ದೆಗಳ ಸಂಖ್ಯೆ: 01
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ
- ವಯೋಮಿತಿ: 60 ವರ್ಷಗಳೊಳಗೆ
2. ಸಲಹೆಗಾರರು (ಆರೋಗ್ಯ ಮತ್ತು ಪೌಷ್ಟಿಕತೆ) :
- ಹುದ್ದೆಗಳ ಸಂಖ್ಯೆ: 01
- ವಿದ್ಯಾರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ ಸಂಬಂಧಿತ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ
- ವಯೋಮಿತಿ: 60 ವರ್ಷಗಳೊಳಗೆ
3. ಪ್ರಾಜೆಕ್ಟ್ ಅಸೋಸಿಯೇಟ್ :
- ಹುದ್ದೆಗಳ ಸಂಖ್ಯೆ: 02
- ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
- ವಯೋಮಿತಿ: 60 ವರ್ಷಗಳೊಳಗೆ
4. ಸಹಾಯಕ ಅಸಿಸ್ಟೆಂಟ್ (ಡೇಟಾ ಎಂಟ್ರಿ ಆಪರೇಟರ್) :
- ಹುದ್ದೆಗಳ ಸಂಖ್ಯೆ: 01
- ವಿದ್ಯಾರ್ಹತೆ: ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಡಿಪ್ಲೋಮಾ ಅಥವಾ ಪದವಿ
- ವಯೋಮಿತಿ: 60 ವರ್ಷಗಳೊಳಗೆ
ಅರ್ಜಿ ಸಲ್ಲಿಕೆ ವಿವರ :
- ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ತಮ್ಮ ರಿಸ್ಯೂಮ್ (Resume) ಪ್ರತಿಯೊಂದಿಗೆ ಅಗತ್ಯ ದಾಖಲೆಗಳನ್ನು 07.04.2025 ರಂದು ಸಂಜೆ 5.30 ಗಂಟೆಯೊಳಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ವಿಳಾಸ :
ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಿಡಬ್ಲ್ಯೂಡಿ ಕಟ್ಟಡ, ಆನಂದ ರಾವ್ ವೃತ್ತ, ಬೆಂಗಳೂರು - 560009 ಈ ವಿಳಾಸಕ್ಕೆ ಖುದ್ದಾಗಿ / ಅಂಚೆ ಮೂಲಕ ಸಲ್ಲಿಸಬಹುದು.
ಮುಖ್ಯ ಮಾಹಿತಿ :
- ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 07.04.2025
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
Comments