Loading..!

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ 2,500 ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತೆ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
Published by: Bhagya R K | Date:10 ಮಾರ್ಚ್ 2025
not found

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD) 2025ನೇ ಸಾಲಿನಲ್ಲಿ 2,500 ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ಉದ್ಯೋಗಾವಕಾಶವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏಪ್ರಿಲ್ 4, 2025.


ಹುದ್ದೆಗಳ ವಿವರ :
ಒಟ್ಟು ಹುದ್ದೆಗಳು : 2500
- ಅಂಗನವಾಡಿ ಕಾರ್ಯಕರ್ತೆ : 1500 ಹುದ್ದೆಗಳು
- ಅಂಗನವಾಡಿ ಸಹಾಯಕಿ : 1000 ಹುದ್ದೆಗಳು


ವಿದ್ಯಾರ್ಹತೆ:
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ : ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಪದವಿ ಪೂರ್ವ (12ನೇ ತರಗತಿ) ಉತ್ತೀರ್ಣರಾಗಿರಬೇಕು. 
- ಅಂಗನವಾಡಿ ಸಹಾಯಕಿ ಹುದ್ದೆಗೆ : (SSLC) 10ನೇ ತರಗತಿ ಉತ್ತೀರ್ಣರಾಗಿರಬೇಕು.


ವಯೋಮಿತಿ :
- ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ, ಗರಿಷ್ಠ ವಯಸ್ಸು 35 ವರ್ಷ. ಸರಕಾರದ ನಿಯಮಾವಳಿಗಳ ಪ್ರಕಾರ, ಮೀಸಲು ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.


ವಯೋಮಿತಿಯಲ್ಲಿ ಸಡಿಲಿಕೆ : 
- ಅಂಗವಿಕಲ (ದಿವ್ಯಾಂಗ) ಅಭ್ಯರ್ಥಿಗಳಿಗೆ 10 ವರ್ಷದ ಸಡಿಲಿಕೆ ಇರಲಿದೆ.


ಅರ್ಜಿಶುಲ್ಕ :
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ.


ವೇತನ ಶ್ರೇಣಿ :
- ಅಂಗನವಾಡಿ ಕಾರ್ಯಕರ್ತೆ: ₹10,000 - ₹15,000
- ಅಂಗನವಾಡಿ ಸಹಾಯಕಿ: ₹5,000 - ₹8,000


ಆಯ್ಕೆ ವಿಧಾನ :
- ಅಭ್ಯರ್ಥಿಗಳ ಆಯ್ಕೆ ಶೈಕ್ಷಣಿಕ ಅರ್ಹತೆ ಮತ್ತು ಸ್ಥಳೀಯ ಪರಿಸ್ಥಿತಿಗಳನ್ನು ಆಧರಿಸಿದ ಮೆರಿಟ್ ಪಟ್ಟಿ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.


ಅರ್ಜಿಸಲ್ಲಿಸುವ ವಿಧಾನ :
1. ಅಧಿಕೃತ ವೆಬ್‌ಸೈಟ್ https://karnemakaone.kar.nic.in/ ಗೆ ಭೇಟಿ ನೀಡಿ.
2. 'ಅಂಗನವಾಡಿ ಶಿಕ್ಷಕಿ ಮತ್ತು ಸಹಾಯಕಿ ನೇಮಕಾತಿ 2025' ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆ ಮತ್ತು ಸೂಚನೆಗಳನ್ನು ಪರಿಶೀಲಿಸಿ.
4. ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
5. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
6. ಅರ್ಜಿ ಸಲ್ಲಿಸಿ, ಭವಿಷ್ಯಕ್ಕಾಗಿ ಪ್ರಿಂಟ್‌ಔಟ್ ತೆಗೆದುಕೊಳ್ಳಿ.


ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 10 ಮಾರ್ಚ್ 2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಏಪ್ರಿಲ್ 2025


ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಅಧಿಕೃತ ವೆಬ್‌ಸೈಟ್ https://karnemakaone.kar.nic.in/ ಗೆ ಭೇಟಿ ನೀಡಿ. 

Comments