ಉತ್ತರ ಕನ್ನಡ ಜಿಲ್ಲೆಯ ಹೋಮ್ ಗಾರ್ಡ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಉತ್ತರ ಕನ್ನಡ ಜಿಲ್ಲಾ ಹೋಮ್ ಗಾರ್ಡ್ ಇಲಾಖೆ 2025ರ ಫೆಬ್ರವರಿಯಲ್ಲಿ ಅಧಿಕೃತ ಪ್ರಕಟಣೆ ಮೂಲಕ 140 ಹೋಮ್ ಗಾರ್ಡ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 03 ಮಾರ್ಚ್ 2025.
ಹುದ್ದೆಗಳ ವಿವರ :
- ಸಂಸ್ಥೆಯ ಹೆಸರು : ಉತ್ತರ ಕನ್ನಡ ಜಿಲ್ಲಾ ಹೋಮ್ ಗಾರ್ಡ್
- ಹುದ್ದೆಗಳ ಸಂಖ್ಯೆ : 140
- ಹುದ್ದೆಯ ಹೆಸರು : ಹೋಮ್ ಗಾರ್ಡ್
- ಉದ್ಯೋಗ ಸ್ಥಳ : ಉತ್ತರ ಕನ್ನಡ, ಕರ್ನಾಟಕ
- ವೇತನ : ಉತ್ತರ ಕನ್ನಡ ಜಿಲ್ಲಾ ಹೋಮ್ ಗಾರ್ಡ್ ನಿಯಮಾವಳಿಗಳ ಪ್ರಕಾರ
ಅರ್ಹತಾ ವಿವರಗಳು :
- ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು.
- ವಯೋಮಿತಿ : ಕನಿಷ್ಠ 19 ವರ್ಷ ಮತ್ತು ಗರಿಷ್ಠ 50 ವರ್ಷ
ಅರ್ಜಿಗೆ ಅಗತ್ಯವಿರುವ ದಾಖಲೆಗಳು :
- 10ನೇ ತರಗತಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಫಿಟ್ನೆಸ್ ಪ್ರಮಾಣಪತ್ರ (ಸರ್ಕಾರಿ ಆಸ್ಪತ್ರೆಯಿಂದ)
- 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
ಆಯ್ಕೆ ಪ್ರಕ್ರಿಯೆ :
- ಮೂಲ್ಯಮಾಪನದ ಮೂಲಕ ಸಂದರ್ಶನ
ಅರ್ಜಿಸಲ್ಲಿಸುವ ವಿಧಾನ :
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ಸ್ವಯಂ-ದೃಢೀಕೃತ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ 03 ಮಾರ್ಚ್ 2025ರೊಳಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ವಿಳಾಸ :
ಹೋಮ್ ಗಾರ್ಡ್ ಜಿಲ್ಲಾ ಕಚೇರಿ, ಸರ್ವೋದಯ ನಗರ, ದಿವೇಕರ್ ಕಾಮರ್ಸ್ ಕಾಲೇಜು ಎದುರು, ಕೊಡಿಬಾಗ್, ಕಾರವಾರ
ಅರ್ಜಿಸಲ್ಲಿಸುವ ಹಂತಗಳು :
1. ಉತ್ತರ ಕನ್ನಡ ಜಿಲ್ಲಾ ಹೋಮ್ ಗಾರ್ಡ್ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಪರಿಶೀಲಿಸಿ.
2. ಮೇಲ್ಕಾಣಿಸಿದ ದಾಖಲೆಗಳನ್ನು ದೃಢೀಕರಿಸಿ, ಮೇಲ್ಕಾಣಿಸಿದ ವಿಳಾಸಕ್ಕೆ ಸಲ್ಲಿಸಿ.
ಮುಖ್ಯ ದಿನಾಂಕಗಳು :
- ಅರ್ಜಿಸಲ್ಲಿಸುವ ಪ್ರಾರಂಭ ದಿನಾಂಕ: 10-02-2025
- ಅರ್ಜಿಸಲ್ಲಿಸುವ ಕೊನೆಯ ದಿನಾಂಕ: 03-03-2025
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
Comments