Loading..!

ಕೃಷಿ ವಿಶ್ವವಿದ್ಯಾಲಯ ಧಾರವಾಡ ಇಲ್ಲಿ ಖಾಲಿ ಇರುವ ವಿವಿಧ ಬೋಧಕ, ತಾಂತ್ರಿಕ ಹಾಗೂ ಸೇವಾ ಸಿಬ್ಬಂದಿ ಹುದ್ದೆಗಳಿಗೆ ನೇಮಕಾತಿ
| Date:30 ಡಿಸೆಂಬರ್ 2019
not found
ಕೃಷಿ ವಿಶ್ವವಿದ್ಯಾಲಯ, ಧಾರವಾಡ ಅಕ್ಟೋಬರ್ 1, 1986 ರಂದು ಸ್ಥಾಪಿತವಾಯಿತು. ಈ ವಿಶ್ವವಿದ್ಯಾಲಯವು 5 ಕಾಲೇಜುಗಳನ್ನು, 27 ಸಂಶೋಧನಾ ಕೇಂದ್ರಗಳನ್ನು, 6 ವಿಸ್ತರಣಾ ಘಟಕಗಳನ್ನು, 6 ಕೃಷಿ ವಿಜ್ಞಾನ ಕೇಂದ್ರಗಳನ್ನು ಮತ್ತು ಕೃಷಿ ತಂತ್ರಜ್ಞಾನ ಮಾಹಿತಿ ಕೇಂದ್ರ ಹೊಂದಿದೆ. ಉತ್ತರ ಕರ್ನಾಟಕದ 7 ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಧಾರವಾಡ, ಗದಗ, ಹಾವೇರಿ, ಮತ್ತು ಉತ್ತರ ಕನ್ನಡ ಇವುಗಳಲ್ಲಿ ಇದರ ಕಾರ್ಯವ್ಯಾಪ್ತಿ ಹೊಂದಿದೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ರಾಜ್ಯಮಟ್ಟದ ಸ್ಥಳೀಯ ವೃಂದದಡಿ ವಿವಿಧ ವಿಷಯಗಳ ಬೋಧಕ ಹಾಗೂ ತಾಂತ್ರಿಕ ಮತ್ತು ಸೇವಾ ಸಿಬ್ಬಂದಿ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರೊಫೆಸರ್ 2 ಹುದ್ದೆಗಳು, ಅಸೋಸಿಯೇಟ್ ಪ್ರೊಫೆಸರ್ 6 ಹುದ್ದೆಗಳು, ಅಸಿಸ್ಟೆಂಟ್ ಪ್ರೊಫೆಸರ್ 09 ಹುದ್ದೆಗಳು, ತಾಂತ್ರಿಕ 01 ಹುದ್ದೆ ಮತ್ತು ಸೇವಾ ಸಿಬ್ಬಂದಿ 23 ಹುದ್ದೆ ಸೇರಿ ಒಟ್ಟು 41 ಹುದ್ದೆಗಳಿಗೆ ಈ ನೇಮಕಾತಿ ಪ್ರಕ್ರಿಯೆಯೂ ನಡೆಯಲಿದೆ.

ಅಭ್ಯರ್ಥಿಗಳು ನಿಗದಿತ ನಮೂನೆಯ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಈ ಕೆಳಗೆ ನೀಡಿರುವ ವಿಳಾಸಕ್ಕೆ ಕೊನೆಯ ದಿನಾಂಕದೊಳಗಾಗಿ ತಲುಪುವಂತೆ ಅಂಚೆ ಮೂಲಕ ಸಲ್ಲಿಸಬಹುದಾಗಿದೆ
ಅರ್ಜಿ ಸಲ್ಲಿಸಬೇಕಾದ ವಿಳಾಸ :
ದಿ ರಿಜಿಸ್ಟ್ರಾರ್,
ಕೃಷಿ ವಿಶ್ವವಿದ್ಯಾಲಯ, ಕೃಷ್ಣನಗರ,
ಧಾರವಾಡ-580005
No. of posts:  41
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments