Loading..!

UGC ನೆಟ್ ಎಕ್ಸಾಮ್ ಗೆ 2024 ನೇ ಸಾಲಿನ ಅಧಿಸೂಚನೆ ಪ್ರಕಟವಾಗಿದ್ದು ಈ ಅಧಿಸೂಚನೆ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Tags: PG
Published by: Yallamma G | Date:24 ಎಪ್ರಿಲ್ 2024
not found

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಜೂನಿಯರ್ ರಿಸರ್ಚ್ ಫೆಲೋಶಿಪ್ ಮತ್ತು ಲೆಕ್ಚರ್ ಶಿಪ್ / ಅಸಿಸ್ಟಂಟ್ ಪ್ರೊಫೆಸರ್ ಶಿಪ್ ಗಾಗಿ ನಡೆಸುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯ(NET) ದಿನಾಂಕ ಪ್ರಕಟಗೊಂಡಿದೆ. ಬರುವ ಜೂನ್ 16 ರಂದು ಪರೀಕ್ಷೆ ನಡೆಯಲಿದ್ದು, ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು 2024 ಮೇ 10 ಕೊನೆಯ ದಿನವಾಗಿದೆ. ಈ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷೆ ಏಜೆನ್ಸಿ(NTA) ನಡೆಸಲಿದೆ. ಈ ಪರೀಕ್ಷೆ ಮೂಲಕ ಜೂನಿಯರ್ ರಿಸರ್ಚ್ ಫೆಲೋ (JRF) ನೀಡಲಾಗುತ್ತದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯ ಭೋದಿಸುವ ಉಪನ್ಯಾಸಕರಿಗೆ, ಸಹಾಯಕ ಪ್ರಾಧ್ಯಾಪಕರಿಗೆ ಅರ್ಹತೆ ನಿಗದಿಪಡಿಸಲಾಗುತ್ತದೆ. ಅಭ್ಯರ್ಥಿಗಳು ಜೆ ಆರ್ ಎಫ್ ಮತ್ತು ಲೆಕ್ಚರೇಶಿಪ್ / ಅಸಿಸ್ಟೆಂಟ್ ಪ್ರೊಫೆಸರ್ ಶಿಪ್ ಎರಡಕ್ಕೂ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯಲ್ಲಿ ತಮ್ಮ ಆದ್ಯತೆಯನ್ನು ತಿಳಿಸಬೇಕಾಗುತ್ತದೆ. ಫಲಿತಾಂಶ ಪ್ರಕಟಿಸುವಾಗಲೇ ಎರಡಕ್ಕೂ ಪ್ರತ್ಯೇಕ ಅರ್ಹತಾ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. JRF ಅರ್ಹತೆ ಪಡೆದರು ಉನ್ನತ ವಿದ್ಯಾಭ್ಯಾಸ ಅಥವಾ ಸಂಶೋಧನೆಗಾಗಿ ದೇಶದ ವಿವಿಧ ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆಗಳನ್ನು ಸೇರಬಹುದು.

Comments

Yogesh Dr Naik ಏಪ್ರಿಲ್ 24, 2024, 8:42 ಅಪರಾಹ್ನ
Yogesh Dr Naik ಏಪ್ರಿಲ್ 24, 2024, 8:42 ಅಪರಾಹ್ನ