Loading..!

ಸಿಬ್ಬಂದಿ ನೇಮಕಾತಿ ಆಯೋಗವು (SSC) ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್‌ (10+2) 2020 ಪರೀಕ್ಷೆಗೆ ಅಧಿಸೂಚನೆ ಪ್ರಕಟಿಸಿದೆ
| Date:4 ಡಿಸೆಂಬರ್ 2019
not found
2020 SSC CHSL ಪರೀಕ್ಷೆಗೆ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 3, 2019 ರಿಂದ ಆನ್‌ಲೈನ್‌ ಅರ್ಜಿ ಸಲ್ಲಿಸಬಹುದಾಗಿದೆ. ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ SSC ಅಧಿಕೃತ ವೆಬ್‌ಸೈಟ್‌ ssc.nic.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಜನವರಿ 1, 2020 ರವರೆಗೆ ಭಾಗಶಃ ಆನ್‌ಲೈನ್‌ ಅರ್ಜಿಗೆ ಅವಕಾಶ ನೀಡಲಾಗುತ್ತದೆ.

ಸ್ಟಾಫ್‌ ಸೆಲೆಕ್ಷನ್‌ ಕಮಿಷನ್ ಲೋವರ್ ಡಿವಿಷನ್ ಕ್ಲರ್ಕ್‌(LDC) ಮತ್ತು ಜೂನಿಯರ್ ಸೆಕ್ರೇಟರಿಯಟ್ ಅಸಿಸ್ಟಂಟ್ (JSA), ಪೋಸ್ಟಲ್ ಅಸಿಸ್ಟಂಟ್ (PA), ವಿಂಗಡಣೆ ಸಹಾಯಕ (SA), ಡಾಟಾ ಎಂಟ್ರಿ ಆಪರೇಟರ್ (DEO), ಡಾಟಾ ಎಂಟ್ರಿ ಆಪರೇಟರ್ ಗ್ರೇಡ್ ಎ ಹುದ್ದೆಗಳನ್ನು, ಕೇಂದ್ರ ಸರ್ಕಾರ ಅಧೀನದ ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ನೇಮಿಸಲು 2020 SSC CHSL ಪರೀಕ್ಷೆ ನಡೆಸಲಿದೆ. ಎಸ್‌ಎಸ್‌ಸಿ'ಯ ಕಂಬೈನ್ಡ್‌ ಹೈಯರ್ ಸೆಕೆಂಡರಿ ಲೆವೆಲ್ ಟೈಯರ್-1 ಪರೀಕ್ಷೆ ಕಂಪ್ಯೂಟರ್ ಆಧಾರಿತವಾಗಿರುತ್ತದೆ.

✍ ಪ್ರಮುಖ ದಿನಾಂಕಗಳು
- ಆನ್‌ಲೈನ್‌ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಡಿಸೆಂಬರ್ 3, 2019
- ಆನ್‌ಲೈನ್‌ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ : ಜನವರಿ 1, 2020
- 2020 SSC CHSL ಟೈಯರ್-1 ಪರೀಕ್ಷೆ ದಿನಾಂಕ : ಮಾರ್ಚ್‌ 16-17, 2020
KPSC ಯಿಂದ ಅದಿಸೂಚಿಸಲಾಗುವ FDA ಮತ್ತು SDA ಪರೀಕ್ಷೆಯಾ ಉತ್ತಮ ತಯಾರಿಗಾಗಿ ಈ ಪುಸ್ತಕಗಳನ್ನು amazon ಜಾಲತಾಣದಿಂದ ಉತ್ತಮ ರಿಯಾಯಿತಿಯೊಂದಿಗೆ ಖರೀದಿಸಿ

Comments