ಅರ್ಬನ್ ಸಹಕಾರಿ ಬ್ಯಾಂಕ್ ಶಿರಸಿ ಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಪದವಿ ಪಾಸಾದವರಿಂದ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 2025 ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಫ್ರಂಟ್ ಡೆಸ್ಕ್ ಅಸೋಸಿಯೇಟ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಏಪ್ರಿಲ್ 8ರೊಳಗೆ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಸಂಸ್ಥೆಯ ಹೆಸರು : ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್
ಉದ್ಯೋಗದ ಪ್ರಕಾರ : ರಾಜ್ಯ ಸರ್ಕಾರಿ ಉದ್ಯೋಗ
ಉದ್ಯೋಗ ಸ್ಥಳ : ಶಿರಸಿ, ಕರ್ನಾಟಕ
ಒಟ್ಟು ಹುದ್ದೆಗಳ ಸಂಖ್ಯೆ : 50
ಹುದ್ದೆಯ ಹೆಸರು : ಫ್ರಂಟ್ ಡೆಸ್ಕ್ ಅಸೋಸಿಯೇಟ್
ಶೈಕ್ಷಣಿಕ ಅರ್ಹತೆ :
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation) ಹೊಂದಿರಬೇಕು.
- ಕನಿಷ್ಠ 50% ಅಂಕಗಳು ಅಗತ್ಯ.
- ಕಂಪ್ಯೂಟರ್ ಜ್ಞಾನ ಅಗತ್ಯ.
- ಕನ್ನಡ ಮತ್ತು ಇಂಗ್ಲೀಷ್ ಭಾಷಾ ಪ್ರಾವೀಣ್ಯತೆ ಇರಬೇಕು.
ವಯೋಮಿತಿ :
- ಕನಿಷ್ಠ: 18 ವರ್ಷ
- ಸಾಮಾನ್ಯ ವರ್ಗ: ಗರಿಷ್ಠ 35 ವರ್ಷ
- 2ಎ, 2ಬಿ, 3ಎ, 3ಬಿ: ಗರಿಷ್ಠ 38 ವರ್ಷ
- ಪ.ಜಾತಿ, ಪ.ಪಂಗಡ, ಪ್ರ1ರ: ಗರಿಷ್ಠ 40 ವರ್ಷ
ಸಂಬಳ ಶ್ರೇಣಿ :
- ರೂ. 21,400/- ರಿಂದ ರೂ. 42,000/- ಪ್ರತಿ ತಿಂಗಳು
ಅರ್ಜಿ ಶುಲ್ಕ :
- ರೂ. 1000/- (ಡಿಮಾಂಡ್ ಡ್ರಾಫ್ಟ್ ಮೂಲಕ "ಮುಖ್ಯ ಕಾರ್ಯನಿರ್ವಹಣಾಧಿಕಾರಿ, ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿಮಿಟೆಡ್" ಹೆಸರಿಗೆ ಪಾವತಿಸಿ)
ಆಯ್ಕೆ ವಿಧಾನ :
1. ಲಿಖಿತ ಪರೀಕ್ಷೆ (Written Exam)
- ಪ್ರಶ್ನೆಗಳ ಪ್ರಮಾಣ: 200
- ಒಟ್ಟು ಅಂಕಗಳು: 200
- ಅವಧಿ: 85 ನಿಮಿಷ
2. ಸಂದರ್ಶನ (Interview)
- ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಯಲಿದೆ.
- ಲಿಖಿತ ಪರೀಕ್ಷೆ: 85% ಅಂಕಗಳು
- ಸಂದರ್ಶನ: 15% ಅಂಕಗಳು
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 18-ಮಾರ್ಚ್-2025
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 08-ಏಪ್ರಿಲ್-2025
ಅರ್ಜಿಯನ್ನು ಕಳುಹಿಸಬೇಕಾದ ವಿಳಾಸ :
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,The Sirsi Urban Cooperative Bank Limited,Head Office, Royarpet, Sirsi – 581401,Uttara Kannada, Karnataka
ಅರ್ಜಿ ಸಲ್ಲಿಸುವ ವಿಧಾನ :
- ಮೊದಲಿಗೆ ಬ್ಯಾಂಕ್ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ.
- ಸರಿ ಇಮೇಲ್ ID ಮತ್ತು ಮೊಬೈಲ್ ನಂಬರ್ ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ. ಅಗತ್ಯ ದಾಖಲೆಗಳು (ID ಪ್ರೂಫ್, ವಯಸ್ಸು, ಶಿಕ್ಷಣ ಅರ್ಹತೆ, ಫೋಟೋ, ರೆಸ್ಯೂಮ್, ಅನುಭವ ದಾಖಲೆ) ಸಿದ್ಧವಾಗಿರಲಿ.
- ಅಧಿಸೂಚನೆ ಅಥವಾ ಕೆಳಗಿನ ಲಿಂಕ್ ಮೂಲಕ ಅರ್ಜಿಯನ್ನು ಡೌನ್‌ಲೋಡ್ ಮಾಡಿ ಮತ್ತು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯಿಸುವಂತೆ ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ ಮಾತ್ರ).
- ಎಲ್ಲಾ ಮಾಹಿತಿಯನ್ನು ಪರಿಶೀಲಿಸಿ, ಅರ್ಜಿಯನ್ನು ನೀಡಿರುವ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್, ಸ್ಪೀಡ್ ಪೋಸ್ಟ್ ಅಥವಾ ಇತರ ಸೇವೆಯ ಮೂಲಕ ಕಳುಹಿಸಿ.
ಪ್ರಮುಖ ಸೂಚನೆ :
- ನಾವು ಒದಗಿಸುವ ಎಲ್ಲಾ ಉದ್ಯೋಗ ಮಾಹಿತಿ ಸಂಪೂರ್ಣ ಉಚಿತವಾಗಿದೆ.
- ಯಾವುದೇ ವ್ಯಕ್ತಿಗಳು ಹಣ ಕೇಳಿದರೆ, ತಕ್ಷಣವೇ ನಮ್ಮ ಇಮೇಲ್ ವಿಳಾಸಕ್ಕೆ ವರದಿ ಮಾಡಿ.
ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಕಟ್ಟಿಕೊಳ್ಳಿ!
Comments