ಭಾರತೀಯ ಉಕ್ಕು ಪ್ರಾಧಿಕಾರ(SAIL)ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಸರ್ಕಾರಿ ಸ್ವಾಮ್ಯದ ಉಕ್ಕು ತಯಾರಿಕಾ ಸಂಸ್ಥೆಯಾದ ಭಾರತೀಯ ಉಕ್ಕು ಪ್ರಾಧಿಕಾರ (SAIL) ವು 24 ಜನವರಿ 1974 ರಂದು ಸ್ಥಾಪಿಸಲಾದ ಸಾರ್ವಜನಿಕ ವಲಯದ ಉದ್ಯಮವಾಗಿದೆ. SAIL ಪ್ರಸ್ತುತ ವಿಶ್ವದ 20 ನೇ ಅತಿದೊಡ್ಡ ಉಕ್ಕು ಉತ್ಪಾದಕ ಮತ್ತು ಭಾರತದಲ್ಲಿ ಅತಿದೊಡ್ಡ ಕಂಪನಿಯಾಗಿದೆ. ಪ್ರಸ್ತುತ SAIL ನಲ್ಲಿ ಖಾಲಿ ಇರುವ 639 ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಫಿಟ್ಟರ್, ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್, ಡೀಸೆಲ್ ಮೆಕ್ಯಾನಿಕ್ ಮತ್ತು ವೆಲ್ದರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 22 ಫೆಬ್ರುವರಿ 2024 ರೊಳಗಾಗಿ ಅರ್ಜಿಯನ್ನು ಆನ್ ಲೈನ್ ಮೂಲಕ ಸಲ್ಲಿಸಬಹುದಾಗಿರುತ್ತದೆ.
ಹುದ್ದೆಗಳ ವಿವರ : 639
Welder - 123
Electrician - 125
Fitter - 120
Machinist - 68
Turner- 58
Copa - 65
Carpenter - 14
Disel Mechanic - 15
RAC - 13
Motar Vehicle Mechanic - 15
Moulder - 14
Medical Lab Technician - 10
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ, ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಲಾಗುವುದು.
ಈ ಹುದ್ದೆಗಳಿಗೆ ಅನುಗುಣವಾಗಿ SSLC/ PUC/ Diploma/ MBBS ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 15 ವರ್ಷಗಳ ವಯೋಮಿತಿಯನ್ನು ಪೂರೈಸಿರಬೇಕು ಮತ್ತು ಗರಿಷ್ಠ- 24 ವರ್ಷ ವಯೋಮಿತಿಯನ್ನು ಮೀರಿರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕ ವೇತನವನ್ನು ನಿಗದಿಪಡಿಸಲಾಗಿದೆ.
* ಈ ನೇಮಕಾತಿಯ ಕುರಿತ ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.





Comments