ಬ್ರೇಕಿಂಗ್ ನ್ಯೂಸ್ : ಶೀಘ್ರದಲ್ಲೇ ನಡೆಲಿದೆ ರೇಲ್ವೆ ಇಲಾಖೆಯಲ್ಲಿನ 10000 ಕ್ಕೂ ಅಧಿಕ ಅಸಿಸ್ಟೆಂಟ್ ಲೋಕೋ ಪೈಲೆಟ್ ಹುದ್ದೆಗಳ ನೇಮಕಾತಿ | ಈ ಕುರಿತು ಮಾಹಿತಿ ನಿಮಗಾಗಿ
Published by: Yallamma G | Date:26 ಮಾರ್ಚ್ 2025
not found

        ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) 10,000 ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗಾಗಿ ಸಿದ್ದತೆಯನ್ನು ನಡೆಸಿದೆ. ಕಳೆದ ನವೆಂಬರ್‌ನಲ್ಲಿ ಒಟ್ಟು 18,799 ಅಸಿಸ್ಟೆಂಟ್ ಲೋಕೋ ಪೈಲಟ್‌ಗಳ (ಎಎಲ್‌ಪಿ) ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿ, ಇದೀಗ ಎರಡನೇ ಹಂತದ ಪರೀಕ್ಷೆಯನ್ನು ನಡೆಸುತ್ತಿರುವ ರೈಲ್ವೆ ನೇಮಕಾತಿ ಮಂಡಳಿಯು (ಆರ್‌ಆರ್‌ಬಿ) ಈ ವರ್ಷದ ಕೇಂದ್ರಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲು ಸಿದ್ಧತೆ ನಡೆಸಿದೆ.


       ಒಟ್ಟು 16 ರೈಲ್ವೆ ವಿಭಾಗಗಳಲ್ಲಿ ಒಟ್ಟು 9,970 ಹುದ್ದೆಗಳನ್ನು ಗುರುತಿಸಲಾಗಿದೆ. ಇದಲ್ಲದೆ ಕೋಲ್ಕತ ಮೆಟ್ರೋ ರೈಲಿಗಾಗಿ 255 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಟ್ಟು ಹುದ್ದೆಗಳ ಸಂಖ್ಯೆ 10,195ಕ್ಕೆ ತಲುಪಲಿದೆ. ನೇಮಕಾತಿ ಅಧಿಸೂಚನೆ ಬಳಿಕವೂ ಹುದ್ದೆಗಳ ಸಂಖ್ಯೆ ಪರಿಷ್ಕರಣೆಯಾಗುವ ನಿರೀಕ್ಷೆಯಿದೆ. ಏಕೆಂದರೆ ಕಳೆದ ಬಾರಿ ಆರಂಭದಲ್ಲಿ ಕೇವಲ 5,696 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಉದ್ದೇಶಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಎಲ್ಲ 21 ರೈಲ್ವೆ ವಲಯಗಳಲ್ಲಿ ಬೇಡಿಕೆಯನ್ನು ಪರಿಷ್ಕರಿಸಿದಾಗ ಈ ಸಂಖ್ಯೆಯು 18,799ಕ್ಕೆ ಏರಿಕೆಯಾಗಿತ್ತು. ಬೆಂಗಳೂರು ಒಳಗೊಳ್ಳುವ ನೈಋತ್ಯ ರೈಲ್ವೆ ವಲಯದಲ್ಲಿ ಒಟ್ಟಾರೆ 1,576 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಳಾಗುತ್ತಿದೆ. ಹೀಗಾಗಿ ಈ ಬಾರಿಯೂ ಹುದ್ದೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ. 


              ವಿದ್ಯಾರ್ಹತೆ : ಅಭ್ಯರ್ಥಿಗಳು ಎಸ್‌ಎಸ್ಎಲ್‌ಸಿ ಜತೆಗೆ ಐಟಿಐ ಪೂರ್ಣಗೊಳಿಸಿರಬೇಕು. ಫಿಟ್ಟರ್, ಎಲೆಕ್ನಿಷಿಯನ್, ಇನ್‌ಸ್ಟ್ರುಮೆಂಟ್ ಮೆಕಾನಿಕ್, ಮಿಲ್‌ರೈಟ್, ಮೆಂಟೇನೆನ್ಸ್ ಮೆಕಾನಿಕ್, ಮೆಕಾನಿಕ್ (ರೇಡಿಯೋ, ಟಿವಿ), ಎಲೆಕ್ಟ್ರಾನಿಕ್ ಮೆಕಾನಿಕ್, ಮೆಕಾನಿಕ್ (ಮೋಟಾರ್ ವೆಹಿಕಲ್) ವೈರ್‌ಮನ್, ಟ್ರ್ಯಾಕ್ಟ‌ರ್ ಮೆಕಾನಿಕ್, ಆರ್ಮೇಚರ್ ಆ್ಯಂಡ್ ಕಾಯ್ಸ್ ವೈಂಡರ್, ಮೆಕಾನಿಕ್ (ಡೀಸೆಲ್), ಹೀಟ್ ಇಂಜಿನ್, ಟರ್ನರ್, ಮಷಿನಿಸ್ಟ್, ರೆಫ್ರಿಜರೇಷನ್ ಆ್ಯಂಡ್ ಏರ್ ಕಂಡೀಷನಿಂಗ್ ಮೆಕಾನಿಕ್ ಟ್ರೇಡ್‌ನಲ್ಲಿ ಐಟಿಐ ಉತ್ತೀರ್ಣರು ಅರ್ಜಿ ಸಲ್ಲಿಸಬಹುದು. ಇನ್ನು, ಎಸ್‌ಎಸ್‌ಎಲ್‌ಸಿ ಬಳಿಕ ಇದೇ ಟ್ರೇಡ್‌ನಲ್ಲಿ ಅಪ್ರೆಂಟೀಸ್ ಶಿಪ್ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಎಸ್‌ಎಸ್ ಎಲ್‌ಸಿ ಬಳಿಕ ಮೆಕಾನಿಕಲ್, ಎಲೆಕ್ಟಿಕಲ್,ಎಲೆಕ್ಟ್ರಾನಿಕ್ಸ್ ಹಾಗೂ ಆಟೋಮೊಬೈಲ್‌ ಇಂಜಿನಿಯರಿಂಗ್‌ನಲ್ಲಿ ಮೂರು ವರ್ಷಗಳ ಡಿಪ್ಲೊಮಾ ಪಡೆದವರು, ಇಂಜಿನಿಯರಿಂಗ್ ಪದವಿ ಪಡೆದವರು ಕೂಡ ಈ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ.


           ಆಯ್ಕೆ : ಎರಡು ಹಂತಗಳ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳ ಮೂಲಕ ಈ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಮೊದಲ ಹಂತವು ಅರ್ಹತಾದಾಯಕವಾಗಿದ್ದು, ಈ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಲಾಗುವುದಿಲ್ಲ. ಎರಡನೇ ಹಂತದಲ್ಲಿ ಪಡೆದ ಅಂಕಗಳ ಆಧಾರದಲ್ಲಿ ಅಂತಿಮ ಪಟ್ಟಿ ತಯಾರಿಸಲಾಗುತ್ತದೆ. ಹುದ್ದೆಗಳ ಆಕಾಂಕ್ಷಿಗಳು ತಮ್ಮ ತಯಾರಿಯನ್ನು ಈಗಿನಿಂದಲೇ ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿ..... 

Comments

*