ಕರ್ನಾಟಕ ರಾಜ್ಯದ ವಿವಿಧ ಸಂಸ್ಥೆಗಳಲ್ಲಿನ ಖಾಲಿ ಹುದ್ದೆಗಳ ನೇಮಕಾತಿಯ ಕುರಿತ ಮಾಹಿತಿ ನಿಮಗಾಗಿ
Published by: Surekha Halli | Date:2 ಮಾರ್ಚ್ 2021
1) -> ಹುನುಗುಂದ ತಾಲ್ಲೂಕಿನ ಹಿರೇಮಾಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರೇಮಾಗಿ ತಾಂಡಾದಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ತಾಂಡಾ ರೋಜ್ಗಾರ್ ಮಿತ್ರ ಆಗಿ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
- ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಅರ್ಹತೆಗಳು
* ಕನಿಷ್ಠ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
* ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು. ಮಹಿಳೆಯರು ಲಭ್ಯವಿಲ್ಲದಿದ್ದಲ್ಲಿ ಪುರುಷರನ್ನು ಆಯ್ಕೆಗೆ ಪರಿಗಣಿಸಲಾಗುವುದು.
* ನರೇಗಾ ಕಾಮಗಾರಿಗಳಲ್ಲಿ ಕೆಲಸ ಮಾಡುವವರಿಗೆ ಆದ್ಯತೆ ನೀಡಲಾಗುತ್ತದೆ.
* ವಯೋಮಿತಿ 45 ವರ್ಷ ಮೀರಿರಬಾರದು.
* ತಾಂಡಾ ನಿವಾಸಿ ಆಗಿರಬೇಕು.
* ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು, ಕನ್ನಡ ಮತ್ತು ಲಂಬಾಣಿ ಭಾಷೆ ತಿಳಿದಿರಬೇಕು.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-03-2021
2) -> ವಿಠ್ಠಲ್ ಕಣ್ಣಿನ ಆಸ್ಪತ್ರೆ ಬಾಗಲಕೋಟ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
ಹಾಸ್ಪಿಟಲ್ ಮ್ಯಾನೇಜರ್ -01
- ಕಂಪ್ಯೂಟರ್ ಅನುಭವ (ಇಂಗ್ಲಿಷ್ ಮತ್ತು ಕನ್ನಡ ಓದಲು ಮತ್ತು ಬರೆಯಲು ಬರಬೇಕು)
ನರ್ಸಿಂಗ್ ಸ್ಟಾಫ್- 02
- ಡಿಪ್ಲೋಮಾ ನರ್ಸಿಂಗ್ (ಪುರುಷ ಅಥವಾ ಮಹಿಳೆ)
3) -> ಹಾವೇರಿ ಜಿಲ್ಲೆಯ ಶಿಗ್ಗಾಂವ್ ನಗರದಲ್ಲಿರುವ ಪೀನಿಕ್ಸ್ ಕಾನ್ವೆಂಟ್ CBSC ಶಾಲೆಯಲ್ಲಿ ಖಾಲಿ ಇರುವ 21 ವಿವಿಧ ಭೋದಕ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
- ಪ್ರಿನ್ಸಿಪಾಲ್ - 01
- ಮೆಥಮೆಟಿಕ್ಸ್ ಟೀಚರ್ -03
- ಸೈನ್ಸ್ ಟೀಚರ್ -03
- ಇಂಗ್ಲಿಷ್ ಟೀಚರ್ - 04
- ಸೋಷಿಯಲ್ ಸೈನ್ಸ್ ಟೀಚರ್ - 03
- ಹಿಂದಿ ಟೀಚರ್ - 03
- P.E ಟೀಚರ್ - 01
- ಕನ್ನಡ ಟೀಚರ್ -01
- ಕಂಪ್ಯೂಟರ್ ಟೀಚರ್ - 02
* ವಿದ್ಯಾರ್ಹತೆ
ಬಿ.ಎ.ಬಿಎಡ್ / ಎಂ.ಎ.ಬಿಎಡ್ / ಎಂ.ಎಸ್ಸಿ ಬಿಎಡ್ / ಎಂಪಿಇಡಿ / ಬಿಪಿಇಡಿ / ಯಾವುದೇ ಪದವಿಯನ್ನು ಹೊಂದಿರಬೇಕು.
- ಈ ಮೇಲೆ ತಿಳಿಸಿದ ನೇಮಕಾತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಪತ್ರಿಕಾ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿಕೊಳ್ಳಬಹುದಾಗಿದೆ.
Comments