ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) ಶಿಶುಕ್ಷು ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
Published by: Rukmini Krushna Ganiger | Date:23 ಆಗಸ್ಟ್ 2021
- ಪವರ್ ಗ್ರಿಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (PGCIL) 1110 ಶಿಶುಕ್ಷು (ಅಪ್ರೆಂಟಿಸ್) ಹುದ್ದೆಗಳ ನೇಮಕಾತಿಗೆ ಕಳೆದ ತಿಂಗಳು ಅಧಿಸೂಚನೆ ಹೊರಡಿಸಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಪ್ರಸ್ತುತ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಮಾಡಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ದಿನಾಂಕ : 31 / ಆಗಸ್ಟ್ / 2021 ರವರೆಗೆ ಅರ್ಜಿ ಸಲ್ಲಿಸಬಹುದು. ಈ ಹಿಂದೆ ದಿನಾಂಕ : 20 / ಆಗಸ್ಟ್ / 2021 ರವರೆಗೆ ಅರ್ಜಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಈ ಹುದ್ದೆಗಳನ್ನು PGCIL ನ ವಿವಿಧ ರಾಜ್ಯದ ಪ್ರಾದೇಶಿಕ ಕೇಂದ್ರಗಳಲ್ಲಿ ನೇಮಕ ಮಾಡಲಿದೆ. ದಕ್ಷಿಣ ಪ್ರಾದೇಶಿಕ ಕಛೇರಿಗಳ ಪೈಕಿ ಬೆಂಗಳೂರು ಶಾಖೆಯಲ್ಲಿಯೂ ಶಿಶುಕ್ಷು (ಅಪ್ರೆಂಟಿಸ್) ಹುದ್ದೆಗಳನ್ನು ನೇಮಕ ಮಾಡಲಿದ್ದು, 114 ಹುದ್ದೆಗಳು ಖಾಲಿ ಇವೆ.
No. of posts: 1110
Comments