ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:21 ಮಾರ್ಚ್ 2025
not found

ಉಕ್ಕಿನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(NMDC)ದಲ್ಲಿ ಖಾಲಿ ಇರುವ 241 ಡೆಪ್ಯೂಟಿ ಜನರಲ್ ಮ್ಯಾನೇಜರ್,  ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ  ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಏಪ್ರಿಲ್ 7 2025 ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ.  


ಹುದ್ದೆಗಳ ವಿವರ : 
* ಡೆಪ್ಯೂಟಿ ಜನರಲ್ ಮ್ಯಾನೇಜರ್ : 29
* ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ : 48
* ಸೀನಿಯರ್ ಮ್ಯಾನೇಜರ್ : 45
* ಮ್ಯಾನೇಜರ್ : 75
* ಡೆಪ್ಯೂಟಿ ಮ್ಯಾನೇಜರ್ : 33
* ಅಸಿಸ್ಟೆಂಟ್ ಮ್ಯಾನೇಜರ್ : 11


ವಿದ್ಯಾರ್ಹತೆ : 
ಅಭ್ಯರ್ಥಿಗಳು Diploma, B.Sc, B.Tech, B.E (ಸಂಬಂಧಿತ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ) ಸ್ನಾತಕೋತ್ತರ ಪದವಿ, ಪದವಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಹೊಂದಿರಬೇಕು.


ವಯೋಮಿತಿ : 
✅ ಡೆಪ್ಯೂಟಿ ಜನರಲ್ ಮ್ಯಾನೇಜರ್ ಹುದ್ದೆಗಳಿಗೆ : ಗರಿಷ್ಠ 52 ವರ್ಷ 
✅ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ , ಸೀನಿಯರ್ ಮ್ಯಾನೇಜರ್, ಮ್ಯಾನೇಜರ್, ಡೆಪ್ಯೂಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ : ಗರಿಷ್ಠ 45 ವರ್ಷ ವಯೋಮಿತಿಯನ್ನು ಹೊಂದಿರಬೇಕು.
- ವಯೋಮಿತಿಯಲ್ಲಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷ
ಪಿಡಬ್ಲ್ಯೂಡಿ (ಸಾಮಾನ್ಯ) ಅಭ್ಯರ್ಥಿಗಳಿಗೆ: 10 ವರ್ಷ
ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳಿಗೆ: 13 ವರ್ಷ
ಪಿಡಬ್ಲ್ಯೂಡಿ (ಎಸ್‌ಸಿ/ಎಸ್‌ಟಿ) ಅಭ್ಯರ್ಥಿಗಳಿಗೆ: 15 ವರ್ಷ 


ಆಯ್ಕೆ : 
ಈ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ. 


ಅರ್ಜಿ ಶುಲ್ಕ :
ಇತರ ಅಭ್ಯರ್ಥಿಗಳಿಗೆ: ರೂ. 500/-​
ಎಸ್‌ಸಿ/ಎಸ್‌ಟಿ/ಪಿಡಬ್ಲ್ಯೂಬಿಡಿ/ಎಕ್ಸ್-ಸರ್ವಿಸ್ಮೆನ್ ವರ್ಗಗಳ ಮತ್ತು ಎನ್‌ಎಮ್‌ಡಿಸಿ ಸ್ಟೀಲ್ ಲಿಮಿಟೆಡ್‌ನ ಇಲಾಖಾ ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ


ವೇತನ : 
- Dy. General Manager (M-8) : 120000-280000/-
- Asst. General Manager (M-7) : 100000-260000/-
- Sr. Manager (M-6) : 90000-240000/-
- Manager (M-5) : 80000-220000/-
- Dy. Manager (M-4) : 70000-200000/-
- Asst. Manager (M-3) : 60000-180000/-


ಮುಖ್ಯ ದಿನಾಂಕಗಳು :
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 2025 ಮಾರ್ಚ್ 18, ಬೆಳಿಗ್ಗೆ 10:00 ಗಂಟೆಗೆ​
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 2025 ಏಪ್ರಿಲ್ 7, ರಾತ್ರಿ 11:59 ಗಂಟೆಗೆ


ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, ದಯವಿಟ್ಟು ಎನ್‌ಎಮ್‌ಡಿಸಿ ಸ್ಟೀಲ್ ಅಧಿಕೃತ ವೆಬ್‌ಸೈಟ್ (nmdcsteel.nmdc.co.in) ಗೆ ಭೇಟಿ ನೀಡಿ.

Comments