ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಬೆಂಗಳೂರಿನಲ್ಲಿ 32 ಕ್ಷೇತ್ರ ದತ್ತಾಂಶ ಸಂಗ್ರಹಕಾರ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಹುದ್ದೆಯ ವಿವರಗಳು :
- ಹುದ್ದೆಯ ಹೆಸರು : ಕ್ಷೇತ್ರ ದತ್ತಾಂಶ ಸಂಗ್ರಹಕಾರ
- ಒಟ್ಟು ಹುದ್ದೆಗಳು : 32
- ಉದ್ಯೋಗ ಸ್ಥಳ : ಬೆಂಗಳೂರು, ಕರ್ನಾಟಕ
ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪಿಯುಸಿ, ಐಟಿಐ ಅಥವಾ ಮನೋವಿಜ್ಞಾನ/ಸಮಾಜಶಾಸ್ತ್ರ/ಗ್ರಾಮೀಣಾಭಿವೃದ್ಧಿ/ಮಹಿಳಾ ಅಧ್ಯಯನದಲ್ಲಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ :
ಅಭ್ಯರ್ಥಿಗಳು ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.
ವೇತನ ಶ್ರೇಣಿ :
ಅಭ್ಯರ್ಥಿಗಳು ಮಾಸಿಕ ರೂ.15,000/- ವೇತನವನ್ನು ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ :
ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಅರ್ಜಿಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತು ಅಗತ್ಯ ದಾಖಲೆಗಳೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಸಂದರ್ಶನದ ವಿವರಗಳು :
- ದಿನಾಂಕ : ಮಾರ್ಚ್ 19, 2025
- ಸ್ಥಳ : ಪರೀಕ್ಷಾ ಸಭಾಂಗಣ, 4ನೇ ಮಹಡಿ, ಎನ್‌ಬಿಆರ್‌ಸಿ ಕಟ್ಟಡ, ನಿಮ್ಹಾನ್ಸ್, ಬೆಂಗಳೂರು-560029, ಕರ್ನಾಟಕ
ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ವೆಬ್‌ಸೈಟ್ https://www.nimhans.ac.in/ ಗೆ ಭೇಟಿ ನೀಡಿ.
Comments