ರಾಷ್ಟ್ರೀಯ ರಾಜಧಾನಿ ಪ್ರದೇಶ ಸಾರಿಗೆ ನಿಗಮ (NCRTC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಅಹ್ವಾನ

ನ್ಯಾಷನಲ್ ಕ್ಯಾಪಿಟಲ್ ರೀಜಿಯನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಷನ್ (NCRTC) 2025 ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಜೂನಿಯರ್ ಇಂಜಿನಿಯರ್, ಜೂನಿಯರ್ ಮೇಂಟೈನರ್ ಹಾಗೂ ಇತರ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು 2025 ಮಾರ್ಚ್ 24 ರಿಂದ 2025 ಏಪ್ರಿಲ್ 24 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಮುಖ್ಯ ಮಾಹಿತಿ :
- ಸಂಸ್ಥೆ: NCRTC (National Capital Region Transport Corporation)
- ಹುದ್ದೆಗಳ ಸಂಖ್ಯೆ: 72
- ಅರ್ಜಿಯ ಪ್ರಾರಂಭ ದಿನಾಂಕ: 24/03/2025
- ಅರ್ಜಿಯ ಕೊನೆಯ ದಿನಾಂಕ: 24/04/2025
- ಪರೀಕ್ಷೆಯ ದಿನಾಂಕ: ಮೇ 2025
ಅರ್ಜಿ ಶುಲ್ಕ :
ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ರೂ. 1000/-
SC / ST ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಶುಲ್ಕ ಇರುವುದಿಲ್ಲ.
(ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ UPI, ವಾಲೆಟ್ ಮೋಡ್ ಮೂಲಕ ಪಾವತಿಸಬಹುದು.)
ವಯೋಮಿತಿ :
- ಕನಿಷ್ಠ ವಯಸ್ಸು : 18 ವರ್ಷ
- ಗರಿಷ್ಠ ವಯಸ್ಸು : 25 ವರ್ಷ
- NCRTC ನಿಯಮಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯವಿರುತ್ತದೆ.
ಒಟ್ಟು ಹುದ್ದೆಗಳ ವಿವರ :
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್) : 16 ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷ ಡಿಪ್ಲೊಮಾ
ಜೂನಿಯರ್ ಇಂಜಿನಿಯರ್ (ಇಲೆಕ್ಟ್ರಾನಿಕ್ಸ್) : 16 ಇಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್‌ನಲ್ಲಿ 3 ವರ್ಷ ಡಿಪ್ಲೊಮಾ
ಜೂನಿಯರ್ ಇಂಜಿನಿಯರ್ (ಮೆಕ್ಯಾನಿಕಲ್) : 03 ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷ ಡಿಪ್ಲೊಮಾ
ಜೂನಿಯರ್ ಇಂಜಿನಿಯರ್ (ಸಿವಿಲ್) : 01 ಸಿವಿಲ್ ಇಂಜಿನಿಯರಿಂಗ್‌ನಲ್ಲಿ 3 ವರ್ಷ ಡಿಪ್ಲೊಮಾ
ಪ್ರೋಗ್ರಾಮಿಂಗ್ ಅಸೋಸಿಯೇಟ್ : 04 ಕಂಪ್ಯೂಟರ್ ಸೈನ್ಸ್ / IT / BCA / B.Sc (CS / IT) ನಲ್ಲಿ 3 ವರ್ಷ ಡಿಪ್ಲೊಮಾ
ಅಸಿಸ್ಟೆಂಟ್ HR : 03 | BBA / BBM ಪದವಿ
ಅಸಿಸ್ಟೆಂಟ್ ಕಾರ್ಪೊರೇಟ್ ಹಾಸ್ಪಿಟಾಲಿಟಿ : 01 ಹೋಟೆಲ್ ಮ್ಯಾನೇಜ್ಮೆಂಟ್‌ನಲ್ಲಿ ಪದವಿ |
ಜೂನಿಯರ್ ಮೇಂಟೈನರ್ (ಎಲೆಕ್ಟ್ರಿಕಲ್) : 18 ITI NCVT / SCVT ಪ್ರಮಾಣಪತ್ರ (ಸಂಬಂಧಿತ ಟ್ರೇಡ್)
ಜೂನಿಯರ್ ಮೇಂಟೈನರ್ (ಮೆಕ್ಯಾನಿಕಲ್) : 10 ITI NCVT / SCVT ಪ್ರಮಾಣಪತ್ರ (ಸಂಬಂಧಿತ ಟ್ರೇಡ್)
ಅರ್ಜಿ ಸಲ್ಲಿಸುವ ವಿಧಾನ :
1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
2. ಅರ್ಜಿಯನ್ನು ಭರ್ತಿಗೆ ಮುನ್ನ, ಅಗತ್ಯ ದಾಖಲೆಗಳು (ID ಪ್ರೂಫ್, ವಿಳಾಸ ವಿವರಗಳು, ಶೈಕ್ಷಣಿಕ ಅರ್ಹತೆ, ಫೋಟೋ, ಸಹಿ) ಸಿದ್ಧವಾಗಿರಲಿ.
3. NCRTC ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
4. ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರೆ ಮಾತ್ರ).
6. ಅರ್ಜಿ ಸಲ್ಲಿಸುವ ಮೊದಲು ಎಲ್ಲ ವಿವರಗಳನ್ನು ಪರಿಶೀಲಿಸಿ.
7. ಅಂತಿಮವಾಗಿ ಸಲ್ಲಿಸಿದ ಅರ್ಜಿಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.
ಈ ಅವಕಾಶವನ್ನು ಬಳಸಿಕೊಳ್ಳಿ ಮತ್ತು NCRTC ಜೊತೆ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ!
Comments