ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳಲ್ಲಿ (NAL) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:1 ಎಪ್ರಿಲ್ 2025
not found

ರಾಷ್ಟ್ರೀಯ ಏರೋಸ್ಪೇಸ್ ಪ್ರಯೋಗಾಲಯಗಳಲ್ಲಿ ಖಾಲಿ ಇರುವ20 ಪ್ರಾಜೆಕ್ಟ್ ಅಸೋಸಿಯೇಟ್-I, ಪ್ರಾಜೆಕ್ಟ್ ಅಸೋಸಿಯೇಟ್-II, ಪ್ರಾಜೆಕ್ಟ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವೃತ್ತಿಯಲ್ಲಿ ಅನುಭವ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು.


ಹುದ್ದೆಗಳ ವಿವರ : 20
ಪ್ರಾಜೆಕ್ಟ್ ಅಸಿಸ್ಟೆಂಟ್-II : 11
ಪ್ರಾಜೆಕ್ಟ್ ಅಸೋಸಿಯೇಟ್-I : 8
ಪ್ರಾಜೆಕ್ಟ್ ಅಸೋಸಿಯೇಟ್-II : 1


ವಿದ್ಯಾರ್ಹತೆ:
✅ ಪ್ರಾಜೆಕ್ಟ್ ಅಸಿಸ್ಟೆಂಟ್-II: ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಪದವಿ.​
✅ ಪ್ರಾಜೆಕ್ಟ್ ಅಸೋಸಿಯೇಟ್-I: ಸಂಬಂಧಿತ ಶಾಖೆಯಲ್ಲಿ B.E ಅಥವಾ B.Tech ಪದವಿ.​
✅ ಪ್ರಾಜೆಕ್ಟ್ ಅಸೋಸಿಯೇಟ್-II: ಸಂಬಂಧಿತ ಶಾಖೆಯಲ್ಲಿ B.E ಅಥವಾ B.Tech ಪದವಿ ಮತ್ತು ಅನುಭವ.


ವಯೋಮಿತಿ:
ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು. ವಯೋಮಿತಿಯಲ್ಲಿ ಸಡಿಲಿಕೆ ಸರ್ಕಾರದ ನಿಯಮಗಳ ಪ್ರಕಾರ ಅನ್ವಯವಾಗುತ್ತದೆ.


ವೇತನ : 
I. Project Assistant-II / PA-II: ₹20,000/- + HRA
II. Project Associate-I /PAT-I: ₹25,000/- + HRA
III. Project Associate-II /PAT-II : ₹28,000/- + HRA 


ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳ ಸಂದರ್ಶನದ ಆಧಾರದ ಮೇಲೆ ನಡೆಯುತ್ತದೆ.

ಸಂದರ್ಶನ ನಡೆಯುವ ದಿನಾಂಕಗಳು : 
# Project Assistant-II : 07-Apr-2025
# Project Associate-I : 08-Apr-2025
# Project Associate-II : 07-Apr-2025
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಅವಕಾಶವನ್ನು ಸದ್ವಿನಿಯೋಗಪಡಿಸಿಕೊಳ್ಳಲು ನಿಗದಿತ ದಿನಾಂಕದಲ್ಲಿ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಲು ವಿನಂತಿಸಲಾಗಿದೆ.


ಅಗತ್ಯ ದಾಖಲೆಗಳು:
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆ, ಅನುಭವ, ವಯಸ್ಸು ಮತ್ತು ಇತರ ಸಂಬಂಧಿತ ಮಾಹಿತಿಗಳನ್ನು ಸಾಬೀತುಪಡಿಸುವ ಮೂಲ ದಾಖಲೆಗಳು ಮತ್ತು ಅವರ ಸ್ವಯಂ-ಸಾಕ್ಷರಿತ ಪ್ರತಿಗಳನ್ನು ಕೊಂಡೊಯ್ಯಬೇಕು.


ಸಂದರ್ಶನ ನಡೆಯುವ ಸ್ಥಳ : 
🔎 🔎  CSIR-NAL (RAB Meeting Complex, National Aerospace Laboratories), Adjacent to SBI, NAL Branch, Kodihalli, Bengaluru – 560017

Comments