Loading..!

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ ಇಲ್ಲಿ ಖಾಲಿ ಇರುವ 121 ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ
Published by: Basavaraj Halli | Date:23 ಜನವರಿ 2020
not found
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಕರ್ನಾಟಕ ಭವನ ದೆಹಲಿ ಮತ್ತು ಕರ್ನಾಟಕದ ವಿವಿಧ ಘಟಕಗಳಿಗೆ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಹುದ್ದೆಗಳ ವಿವರವೂ ಈ ಕೆಳಗೆ ನಿಂತಿರುತ್ತದೆ

* ವ್ಯವಸ್ಥಾಪಕರು
* ಸಹಾಯಕ ವ್ಯವಸ್ಥಾಪಕರು
* ಸ್ವಾಗತಗಾರರು
* ಸೌಸ್ ಶೆಫ್
* ದ್ವಿತೀಯ ದರ್ಜೆ ಲೆಕ್ಕ ಸಹಾಯಕರು
* ಹೌಸ್ ಕೀಪಿಂಗ್ ಸೂಪರ್ ವೈಸರ್
* ಉಗ್ರಾಣಿಕರು
* ಅಡುಗೆಯವರು
* ಸಹಾಯಕ ಅಡುಗೆಯವರು
* ರೂಮ್ ಬಾಯ್
* ಅಡುಗೆ ಸಹಾಯಕರು
* ಮಾಣಿ (ರೆಸ್ಟೋರೆಂಟ್)
* ಸಾಮಾನ್ಯ ಉಪಯೋಗಿ ಕೆಲಸಗಾರರು
ಈ ಹುದ್ದೆಗಳು ಕರ್ನಾಟಕ ಮತ್ತು ನವದೆಹಲಿಯಲ್ಲಿ ಖಾಲಿ ಇದ್ದು ಈ ಕುರಿತ ವಿವರಗಳನ್ನು ಕೆಳಗೆ ನೀಡಿರುವ ಅಧಿಸೂಚನೆಯ ಮೂಲಕ ಪಡೆಯಬಹುದಾಗಿದೆ.

- ಹುದ್ದೆಗಳಿಗೆ ನಿಗದಿಪಡಿಸಿದ ವೇತನವು ದೆಹಲಿ ಮತ್ತು ರಾಜ್ಯದಲ್ಲಿ ಬೇರೆ ಬೇರೆಯಾಗಿದ್ದು ವಿವರಣೆಗಳಿಗೆ ಅಧಿಸೂಚನೆಗಳನ್ನು ಗಮನಿಸತಕ್ಕದ್ದು
- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹುದ್ದೆಗಳಿಗನುಗುಣವಾಗಿ ವಿದ್ಯಾರ್ಹತೆ, ವೇತನ, ಸೇವಾನುಭವವನ್ನು ನಿಗದಿಪಡಿಸಲಾಗಿದ್ದು ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿಕೊಳ್ಳಬೇಕು.

ಅರ್ಜಿ ಸಲ್ಲಿಸುವುದು ಹೇಗೆ:
ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಕೇಳಲಾಗಿರುವ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ವಿದ್ಯಾರ್ಹತೆ ಮತ್ತು ಸೇವಾನುಭವ ದಾಖಲೆಗಳು ಮತ್ತು ಇತ್ತೀಚಿನ ಭಾವಚಿತ್ರದೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕೊನೆಯ ದಿನಾಂಕವಾದ ದಿನಾಂಕ 03 ಫೆಬ್ರವರಿ 2020 ರಂದು ತಲುಪುವಂತೆ ಸಲ್ಲಿಸತಕ್ಕದ್ದು.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ವ್ಯವಸ್ಥಾಪಕರು,
ಆಡಳಿತ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿಯಮಿತ,
ಕಾರ್ಯನಿರ್ವಾಹಕ ಕಚೇರಿ, ನೆಲಮಹಡಿ ಯಶವಂತಪುರ ಟಿಟಿಎಂಸಿ,
ಬಿಎಂಟಿಸಿ ಬಸ್ ನಿಲ್ದಾಣ, ಯಶವಂತಪುರ ವೃತ್ತ,
ಬೆಂಗಳೂರು-560022
No. of posts:  121
KAS ಕನಸು ಹೊತ್ತ ಅಭ್ಯರ್ಥಿಗಳಿಗಾಗಿ ವಿವಿಧ ಪುಸ್ತಕಗಳನ್ನು ಸಂಗ್ರಹಿಸಿ ಇಲ್ಲಿ ನೀಡಲಾಗಿದೆ, ಇವುಗಳನ್ನು ಉತ್ತಮ ರಿಯಾಯಿತಿಯೊಂದಿಗೆ Amazon ನಿಂದ ಖರೀದಿಸಿ ಉತ್ತಮ ತಯಾರಿ ನಡೆಸಿ

Comments

Darshan Mc ಫೆಬ್ರ. 1, 2020, 7:09 ಅಪರಾಹ್ನ