KPSC ಯಿಂದ 750 ಭೂಮಾಪಕರ ಹುದ್ದೆಗಳ ನೇಮಕಾತಿಗಾಗಿ ಇದೀಗ ಅಧಿಸೂಚನೆ ಪ್ರಕಟ | ಈ ಕುರಿತ ಸವಿವರವಾದ ಮಾಹಿತಿ ನಿಮಗಾಗಿ
Published by: Basavaraj Halli | Date:26 ನವೆಂಬರ್ 2024

ಕರ್ನಾಟಕ ರಾಜ್ಯ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಉಳಿದಿರುವ ಸುಮಾರು 364 ಲ್ಯಾಂಡ್ ಸರ್ವೇಯರ್(ಭೂಮಾಪಕರು) ಹುದ್ದೆಗಳ ಭರ್ತಿ ಮಾಡಲು ಇದೀಗ ಅಧಿಸೂಚನೆ ಬಿಡುಗಡೆಗೊಂಡಿದ್ದು, ಪ್ರತಿ ಜಿಲ್ಲೆಯಲ್ಲೂ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿದ ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಹುದ್ದೆಯ ಹೆಸರು : ಭೂಮಾಪಕರು
ಹುದ್ದೆಗಳ ಸಂಖ್ಯೆ : 750
ಈ ಹಿಂದಿನ ಅಧಿಸೂಚನೆಯಲ್ಲಿ ಉಳಿಕೆ ಮೂಲ ವೃಂದಕ್ಕೆ 264 ಹುದ್ದೆಗಳನ್ನು ಮೀಸಲಿಡಲಾಗಿತ್ತು. ಇವುಗಳಿಗೆ 296 ಹುದ್ದೆಗಳನ್ನು ಸೇರಿಸಿ ಒಟ್ಟು 560 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೈದರಾಬಾದ್ ಕರ್ನಾಟಕ ವಿಭಾಗಕ್ಕೆ 100 ಹುದ್ದೆಗಳನ್ನು ಮೀಸಲಿಡಲಾಗಿತ್ತು, ಇನ್ನೂ 90 ಹುದ್ದೆಗಳನ್ನು ಹೆಚ್ಚಿಸಿ ಒಟ್ಟು 190 ಹುದ್ದೆಗಳನ್ನು ಹೈ-ಕ ವಿಭಾಗಕ್ಕೆ ನೀಡಲಾಗಿದೆ. ಅಭ್ಯರ್ಥಿಗಳಿಗೆ ಡಿಸೆಂಬರ್ 9ರ ತನಕ ಅರ್ಜಿ ಸಲ್ಲಿಸಲು ಮತ್ತೆ ಅವಕಾಶವನ್ನು ನೀಡಲಾಗಿದೆ.
No. of posts: 750
Comments