Loading..!

ಕರ್ನಾಟಕ ಲೋಕಸೇವಾ ಆಯೋಗದಿಂದ PUC ಪಾಸಾದವರಿಗೆ ಮಾದರಿ ಪರೀಕ್ಷೆಗಾಗಿ ಅಧಿಸೂಚನೆ ಪ್ರಕಟ | ಈ ಕುರಿತ ಮಾಹಿತಿ ನಿಮಗಾಗಿ
Published by: Basavaraj Halli | Date:26 ಡಿಸೆಂಬರ್ 2022
not found
ಕರ್ನಾಟಕ ಲೋಕಸೇವಾ ಆಯೋಗದಿಂದ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದಿನ ದಿನಗಳಲ್ಲಿ CBRT (Computer Based Recruitment Test) ಮಾದರಿಯಲ್ಲಿ, ನಡೆಸಲು ಆಯೋಗವು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಪ್ರಥಮ ಹಂತವಾಗಿ ಸದರಿ CBRT ಪರೀಕ್ಷೆಯನ್ನು ನಡೆಸುವ ಸಾಧ್ಯತೆಗಳನ್ನು ಪರಿಶೀಲಿಸಲು ಪ್ರಾಯೋಗಿಕವಾಗಿ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಒಂದು ಅಣಕು ಪರೀಕ್ಷೆ (Mock Test)ಅನ್ನು ಕರ್ನಾಟಕ ರಾಜ್ಯದ ಆಯ್ದ ಜಿಲ್ಲೆಗಳಲ್ಲಿ, ದಿನಾಂಕ:07-01-2023ರಂದು ನಡೆಸಲು ತೀರ್ಮಾನಿಸಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ, ಗಾಂಭೀರ್ಯತೆ, ಇಚ್ಛೆ ಹಾಗೂ ಆಸಕ್ತಿಯುಳ್ಳ ಅಭ್ಯರ್ಥಿಗಳಿಂದ Online ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪರೀಕ್ಷೆಯು ಪ್ರಾಯೋಗಿಕ ಪರೀಕ್ಷೆಯಾಗಿರುವುದರಿಂದ ಸೀಮಿತ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮೊದಲು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುವುದು.

* ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 23-12-2022 ಮತ್ತು ಕೊನೆಯ ದಿನಾಂಕ: 31-12-2022 ಆಗಿರುತ್ತದೆ. 

* ಆಯ್ದ ಜಿಲ್ಲೆಗಳಲ್ಲಿ, CERT ಮಾದರಿಯಲಿ. (Mock Test) ಅಣಕು ಪರೀಕ್ಷೆಯನ್ನು ನಡೆಸಲಾಗುತ್ತಿರುವುದರಿಂದ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಸಮಯದಲ್ಲಿಯೇ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳತಕ್ಕದ್ದು.

* ಸದರಿ ಪರೀಕ್ಷಾ ಕೇಂದ್ರಗಳಿಗೆ ನಿಗದಿಪಡಿಸಿರುವ ಸಂಖ್ಯೆಯಷ್ಟು ಅರ್ಜಿ ಸ್ವೀಕೃತಗೊಂಡ ನಂತರ ಸದರಿ ಕೇಂದ್ರಕ್ಕೆ ಅರ್ಜಿ ಸ್ವೀಕೃತ ಕಾರ್ಯವನ್ನು ಸ್ಥಗಿತಗೊಳಿಸಲಾಗವುದು.

Comments

Shrishail Kanni ಡಿಸೆಂ. 26, 2022, 10:15 ಅಪರಾಹ್ನ
Dhananjay M ಡಿಸೆಂ. 26, 2022, 10:43 ಅಪರಾಹ್ನ