Life is like this loading!

We've to prepare well to perform better

ಕೊಪ್ಪಳ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನೇಮಕಾತಿ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ
Author: Savita Halli | Date:2 ಜೂನ್ 2019
Image not found

  ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಬಾಲಕಿಯರ ವಸತಿ ಕಾಲೇಜು, ವಸತಿ ಶಾಲೆ ಹಾಗೂ ಮೌಲಾನ್ ಅಜಾದ್ ಮಾದರಿ ಶಾಲೆಗಳಲ್ಲಿ ಖಾಲಿ ಇರುವ ಬೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಲಬುರ್ಗಾದ ಸರಕಾರಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಿಜ್ಞಾನ ಮತ್ತು ವಾಣಿಜ್ಯ ಬಾಲಕಿಯರ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಭೌತಶಾಸ್ತ್ರ,ಗಣಿತ, ಜೀವಶಾಸ್ತ್ರ ಈ ವಿಷಯಗಳಲ್ಲಿ:ತಲಾ 1 ಉಪನ್ಯಾಸಕ ಹುದ್ದೆ, ಇತಿಹಾಸ,ವಾಣಿಜ್ಯಶಾಸ್ತ್ರ ಹಾಗೂ ಅರ್ಥಶಾಸ್ತ್ರದ ವಿಷಯಗಳಲ್ಲಿ ತಲಾ 1 ಉಪನ್ಯಾಸಕರ ಹುದ್ದೆ ಖಾಲಿ ಇದೆ.
ಕೊಪ್ಪಳದ ಮೌಲಾನ್ ಆಜಾದ್ ಮಾದರಿ ಶಾಲೆಯಲ್ಲಿ ಕನ್ನಡ -1,ಇಂಗ್ಲಿಷ್-3,ಉರ್ದು-1,ಗಣಿತ-2, ಸಮಾಜ ವಿಜ್ಞಾನ-5,ವಿಜ್ಞಾನ-6 ಹಾಗೂ ಹಿರೇಬೆಣಕಲ್ ನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 1 ಗಣಕಯಂತ್ರ ಶಿಕ್ಷಕರ ಹುದ್ದೆ ಒಂದು ಖಾಲಿ ಇದೆ. ಈ ಹುದ್ದೆಗಳಿಗೆ ಅರ್ಹತೆ ಹೊಂದಿದ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಜೂನ್ 10 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ:
ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ,
ಜಿಲ್ಲಾ ಆಡಳಿತ ಭವನ
ಕೊಪ್ಪಳ - 583231

ಈ ಅಧಿಸೂಚನೆ ಕುರಿತು ಹೆಚ್ಚಿನ ಮಾಹಿತಿಯ ಅವಶ್ಯಕತೆ ಇದ್ದಲಿ ಈ ದೂರವಾಣಿ ಸಂಖ್ಯೆಗೆ ಕರೆಮಾಡಿ ವಿಚಾರಿಸಬಹುದು :
08539-225070

No. of posts:  21

Application Start Date:  2 ಜೂನ್ 2019

Application End Date:  10 ಜೂನ್ 2019

Work Location:  Koppala

* If above links are not opening, use the browser to visit kpscvaani.com website