ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 540 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:1 ಡಿಸೆಂಬರ್ 2023
ಕರ್ನಾಟಕ ಅರಣ್ಯ ಇಲಾಖೆ 2023 - 24 ನೇ ಸಾಲಿನಲ್ಲಿ ಗ್ರೂಪ್ ಸಿ ವೃಂದದ 540 ಅರಣ್ಯ ರಕ್ಷಕರು (ಗಸ್ತು ಅರಣ್ಯಪಾಲಕ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರಣ್ಯ ಇಲಾಖೆಯು ಸರಕಾರ ಅನುಮತಿಸಿರುವ 506 ಹುದ್ದೆಗಳು ಮತ್ತು ಇಂಬಾಕಿ 34 ಹುದ್ದೆಗಳು ಒಟ್ಟು 540 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು 30 ಡಿಸೆಂಬರ್ 2023 ರೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಭಾರತೀಯ ನಾಗರಿಕನಾಗಿರಬೇಕು.
ಹುದ್ದೆಗಳ ವಿವರ : 540
ಬೆಂಗಳೂರು - 49
ಬೆಳಗಾವಿ -12
ಬಳ್ಳಾರಿ - 29
ಚಾಮರಾಜನಗರ - 83
ಚಿಕ್ಕಮಗಳೂರು - 52
ಧಾರವಾಡ -05
ಹಾಸನ -18
ಕಲಬುರ್ಗಿ - 58
ಕೆನರಾ - 33
ಕೊಡಗು - 26
ಮಂಗಳೂರು -62
ಮೈಸೂರು - 47
ಶಿವಮೊಗ್ಗ - 66
No. of posts: 540
Comments