Loading..!

ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
Tags: PG
Published by: Surekha Halli | Date:15 ಜುಲೈ 2020
not found
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ ಇಲ್ಲಿನ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕಾನೂನು ಹಾಗೂ ಪ್ರಜಾಪ್ರಭುತ್ವ ಮತ್ತು ಸಂವಿಧಾನಾತ್ಮಕ ಸರ್ಕಾರ ಈ ಎರಡು ಸಂಶೋಧನಾ ಕೇಂದ್ರಗಳ ಹುದ್ದೆಗಳನ್ನು ಮಾಸಿಕ ಸಂಚಿತ ವೇತನ ಆಧಾರದ ಮೇಲೆ ಎರಡು ವರ್ಷದ ಅವಧಿಗೆ ನೇಮಕಾತಿಗಾಗಿ ಮೀಸಲಾತಿ ಆಧಾರ ದನ್ವಯ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

* ಹುದ್ದೆಗಳ ವಿವರ :
- ಹಿರಿಯ ಸಂಶೋಧನಾ ಸಹಾಯಕರು
- ಕಿರಿಯ ಸಂಶೋಧನಾ ಸಹಾಯಕರು

ಆಸಕ್ತಿಯುಳ್ಳ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಜಾಲತಾಣದಲ್ಲಿ ಲಭ್ಯವಿರುವ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಲಾದ ಅರ್ಜಿಗಳನ್ನು ಹಾರ್ಡ್ ಮತ್ತು ಪ್ರತಿಗಳನ್ನು "ಕುಲಸಚಿವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ - 580025" ಈ ವಿಳಾಸಕ್ಕೆ ದಿನಾಂಕ : 30-07-2020 ರೊಳಗಾಗಿ ತಲುಪುವಂತೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ವಿಶ್ವವಿದ್ಯಾಲಯದ ಜಾಲತಾಣವನ್ನು ವೀಕ್ಷಿಸಬಹುದು.
No. of posts:  6

Comments