Loading..!

ಶೀಘ್ರದಲ್ಲೇ ರಾಜ್ಯ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳಿಂದ 5987 ಹುದ್ದೆಗಳ ಭರ್ಜರಿ ನೇಮಕಾತಿ! ಈ ಕುರಿತು ಸಂಪೂರ್ಣ ಮಾಹಿತಿ ನಿಮಗಾಗಿ
Published by: Yallamma G | Date:27 ಜುಲೈ 2024
not found

ಕರ್ನಾಟಕ ಗೃಹ ಇಲಾಖೆಯ ಅಧೀನದ 5987 ಹುದ್ದೆಗಳ ನೇಮಕಾತಿಗಾಗಿ ಆರ್ಥಿಕ ಇಲಾಖೆಯು ಅನುಮೋದನೆ ನೀಡಿದೆ ಎಂದು ಗೃಹ ಸಚಿವರ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ, ಅಭಿಯೋಗ ಮತ್ತು ಸರ್ಕಾರಿ ವಾಣಿಜ್ಯ ಇಲಾಖೆ, ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ ಮತ್ತು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗಳಲ್ಲಿ ಹುದ್ದೆಗಳನ್ನು ನೇಮಕಮಾಡಿಕೊಳ್ಳಲು ಶೀಘ್ರದಲ್ಲಿಯೇ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ.
ಆರ್ಥಿಕ ಇಲಾಖೆಯ ಅನುಮೋದನೆ ಪಡೆದ ಹುದ್ದೆಗಳ ವಿವರ : 5987
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ : 4115
ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್/ಡಿಎಆರ್): 2000
ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (ಕೆಎಸ್‌ಆರ್‌ಪಿ): 1500
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2022-23): 300
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ (2023-24): 300
ವಿಶೇಷ ತನಿಖಾಧಿಕಾರಿ: 15
ಎಸ್‌ಎಸ್ಎಲ್‌ಸಿ, ದ್ವಿತೀಯ ಪಿಯುಸಿ/ ತತ್ಸಮಾನ ವಿದ್ಯಾರ್ಹತೆ, ಪದವಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 


- ಅಗ್ನಿಶಾಮಕ ತುರ್ತು ಸೇವೆಗಳ ಇಲಾಖೆ :
ಅಗ್ನಿಶಾಮಕ ಠಾಣಾಧಿಕಾರಿ: 36
ಚಾಲಕ ತಂತ್ರಜ್ಞ: 82
ಅಗ್ನಿಶಾಮಕ ಚಾಲಕ: 227
ಅಗ್ನಿಶಾಮಕ: 1222
ಎಸ್ಸೆಸ್ಸೆಲ್ಸಿ, ಡಿಪ್ಲೊಮಾ, ದ್ವಿತೀಯ ಪಿಯುಸಿ/ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದು.


- ಅಭಿಯೋಗ ಮತ್ತು ಸರ್ಕಾರಿ ವಾಣಿಜ್ಯ ಇಲಾಖೆ : 
ಪ್ರಥಮ ದರ್ಜೆ ಸಹಾಯಕರು: 7
ದ್ವಿತೀಯ ದರ್ಜೆ ಸಹಾಯಕರು: 7
ಶೀಘ್ರಲಿಪಿಗಾರರು: 43
ಹುದ್ದೆಗೆ ಅನುಗುಣವಾಗಿ ದ್ವಿತೀಯ ಪಿಯುಸಿ/ ತತ್ಸಮಾನ ವಿದ್ಯಾರ್ಹತೆ, ಪದವಿ ಹಾಗೂ ಶೀಘ್ರಲಿಪಿ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. 


- ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆ : 
ಸಹಾಯಕ ಅಧೀಕ್ಷಕರ ಹುದ್ದೆ: 03
ವೀಕ್ಷಕರ ಹುದ್ದೆ : 197
ದ್ವಿತೀಯ ದರ್ಜೆ ಬೋಧಕರ ಹುದ್ದೆ: 22


- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ : 
ಶೀಘ್ರಲಿಪಿಗಾರರು: 01 
ದ್ವಿತೀಯ ದರ್ಜೆ ಸಹಾಯಕರು: 14 
ಕಲ್ಯಾಣ ಸಂಘಟಕರು: 14


ಈ ಮೇಲಿನ ಎಲ್ಲ ಹುದ್ದೆಗಳಿಗೆ ಆರ್ಥಿಕ ಇಲಾಖೆಯು ನೇರ ನೇಮಕಾತಿಗೆ ಅನುಮೋದನೆ ನೀಡಿದ್ದು, ಸಂಪೂರ್ಣ ಸಹಮತಿ ನೀಡಿದೆ. ಈ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಬೇಕಾಗಿರುತ್ತದೆ ಎಂದಿರುವ ಗೃಹ ಇಲಾಖೆಯು, ಯಾವಾಗ ಅಧಿಸೂಚನೆ ಬಿಡುಗಡೆ ಮಾಡಲಾಗುವುದು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ. ಹುದ್ದೆಗಳ ಆಕಾಂಕ್ಷಿಗಳು ತಮ್ಮ ತಯಾರಿಯನ್ನು ಈಗಿನಿಂದಲೇ ಮತ್ತಷ್ಟು ಚುರುಕುಗೊಳಿಸಿ ಯಶಸ್ವಿಯಾಗಿ..... 

No. of posts:  5987

Comments