Loading..!

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ
Tags: Degree
Published by: Yallamma G | Date:11 ಫೆಬ್ರುವರಿ 2025
not found

ಕರ್ನಾಟಕ ಉಚ್ಚ ನ್ಯಾಯಾಲಯ ಬೆಂಗಳೂರು ಇಲ್ಲಿ ಖಾಲಿ ಇರುವ158 ಸಿವಿಲ್ ನ್ಯಾಯಾಧೀಶರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ 12/02/2025ರ ರೊಳಗೆ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವವನ್ನು ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.


ಹುದ್ದೆಗಳ ವಿವರ:
- ಹುದ್ದೆಯ ಹೆಸರು: ಸಿವಿಲ್ ನ್ಯಾಯಾಧೀಶ
- ಹುದ್ದೆಗಳ ಸಂಖ್ಯೆ: 158
- ವೇತನ ಶ್ರೇಣಿ: ರೂ. 77,840/- ರಿಂದ ರೂ. 1,36,520/- ಪ್ರತಿ ತಿಂಗಳು


ಅರ್ಹತಾ ಮಾನದಂಡ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಬೋರ್ಡ್ ಅಥವಾ ವಿಶ್ವವಿದ್ಯಾಲಯದಿಂದ ಕಾನೂನು ಪದವಿ (ಎಲ್‌ಎಲ್‌ಬಿ) ಪೂರ್ಣಗೊಳಿಸಿರಬೇಕು.

ವಯೋಮಿತಿ: 12 ಮಾರ್ಚ್ 2025 ರಂತೆ ಅಭ್ಯರ್ಥಿಗಳ ಗರಿಷ್ಠ ವಯಸ್ಸು 35 ವರ್ಷವಾಗಿರಬೇಕು.
ವಯೋಮಿತಿಯಲ್ಲಿ ಸಡಿಲಿಕೆ:
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಕ್ಯಾಟ್-I ಅಭ್ಯರ್ಥಿಗಳಿಗೆ: 5 ವರ್ಷ
- ಕ್ಯಾಟ್-IIA/IIB/IIIA/IIIB ಅಭ್ಯರ್ಥಿಗಳಿಗೆ: 3 ವರ್ಷ


ಅರ್ಜಿ ಶುಲ್ಕ:
- ಪ್ರಾಥಮಿಕ ಪರೀಕ್ಷೆ:

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಕ್ಯಾಟ್-I/ದಿವ್ಯಾಂಗ ಅಭ್ಯರ್ಥಿಗಳಿಗೆ: ರೂ. 500/-
ಸಾಮಾನ್ಯ/ಕ್ಯಾಟ್-IIA/IIB/IIIA/IIIB ಅಭ್ಯರ್ಥಿಗಳಿಗೆ: ರೂ. 1,000/-
- ಮುಖ್ಯ ಪರೀಕ್ಷೆ:
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಕ್ಯಾಟ್-I/ದಿವ್ಯಾಂಗ ಅಭ್ಯರ್ಥಿಗಳಿಗೆ: ರೂ. 750/-
ಸಾಮಾನ್ಯ/ಕ್ಯಾಟ್-IIA/IIB/IIIA/IIIB ಅಭ್ಯರ್ಥಿಗಳಿಗೆ: ರೂ. 1,500/-
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಬಹುದು.


ಆಯ್ಕೆ ಪ್ರಕ್ರಿಯೆ:
1. ಪ್ರಾಥಮಿಕ ಪರೀಕ್ಷೆ
2. ಮುಖ್ಯ ಲಿಖಿತ ಪರೀಕ್ಷೆ
3. ವೈವಾ-ವೋಸ್
4. ಕಂಪ್ಯೂಟರ್ ಪರೀಕ್ಷೆ

ಅರ್ಜಿ ಸಲ್ಲಿಸುವ ವಿಧಾನ:
1. ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಗಳನ್ನು ಪರಿಶೀಲಿಸಿ.
2. ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ.
3. ಕೆಳಗಿನ ಲಿಂಕ್ ಮೂಲಕ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡಿ.
4. ಅಗತ್ಯವಿರುವ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ.
6. ಅರ್ಜಿ ಸಲ್ಲಿಸಿದ ನಂತರ, ಅರ್ಜಿ ಸಂಖ್ಯೆಯನ್ನು ಸಂಗ್ರಹಿಸಿ.


ಮುಖ್ಯ ದಿನಾಂಕಗಳು:
- ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 10 ಫೆಬ್ರವರಿ 2025
- ಅರ್ಜಿ ಸಲ್ಲಿಸಲು ಕೊನಯ ದಿನಾಂಕ: 12 ಮಾರ್ಚ್ 2025

Comments