ಸೆಂಟರ್ ಫಾರ್ ಡೆವಲಪ್‌ಮೆಂಟ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್ (C-DAC)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ | ಕೂಡಲೇ ಅರ್ಜಿ ಸಲ್ಲಿಸಿ

ಸೆಂಟರ್ ಫಾರ್ ಡೆವಲಪ್‌ಮೆಂಟ್ ಆಫ್ ಅಡ್ವಾನ್ಸ್‌ಡ್ ಕಂಪ್ಯೂಟಿಂಗ್ (C-DAC) ದಲ್ಲಿ ಖಾಲಿ ಇರುವ 13 ಎಕ್ಸಿಕ್ಯೂಟ್ ಡೈರೆಕ್ಟರ್ ಮತ್ತು ಸೈನ್ಟಿಸ್ಟ್-C ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆಯನ್ನು ಹೊರಡಿಸಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದೆಲ್ಲೆಡೆ ಕೆಲಸ ಮಾಡಲು ಸಿದ್ಧರಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ವೃತ್ತಿ ಅನುಭವ ಹೊಂದಿದವರಿಗೆ ಮೊದಲ ಆಧ್ಯತೆ ನೀಡಲಾಗುವುದು.
ಹುದ್ದೆಗಳ ವಿವರ :
ಹುದ್ದೆಯ ಹೆಸರು : ಗ್ರೂಪ್ A ವಿಜ್ಞಾನ ಮತ್ತು ತಂತ್ರಜ್ಞಾನ
ಒಟ್ಟು ಹುದ್ದೆಗಳು : 13
ಸ್ಥಳಗಳು: ಕೊಲ್ಕತ್ತಾ, ಮೊಹಾಲಿ, ತಿರುವನಂತಪುರಂ, ಪುಣೆ, ಚೆನ್ನೈ, ದೆಹಲಿ, ಹೈದರಾಬಾದ್, ಬೆಂಗಳೂರು.
ಹುದ್ದೆಗಳ ವಿವರ : 13
Executive Director : 01 - Kolkata
Executive Director : 01 - Mohali
Executive Director : 01 - Thiruvananthapuram
Scientist C (Level 11) : 02 - Pune
Scientist C (Level 11) : 01 - Chennai
Scientist C (Level 11) : 01 - Delhi
Scientist C (Level 11) : 02 - Hyderabad
Scientist C (Level 11) : 04 - Bangalore
ವೇತನ ಶ್ರೇಣಿ :
ಕಾರ್ಯನಿರ್ವಾಹಕ ನಿರ್ದೇಶಕರು(Executive Director) (ಪೇ ಲೆವೆಲ್ 14): ₹1,44,200 - ₹2,18,200
ವಿಜ್ಞಾನಿ C (Scientist C (Level 11) : ₹67,700 - ₹2,08,700
ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳಿಂದ B.Tech/ B.E, M.E/ M.Tech, MCA, M.Phil/ Ph.D ಪದವಿಗಳನ್ನು ಹೊಂದಿರಬೇಕು.
ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಅಭ್ಯರ್ಥಿಗಳು C-DAC ಅಧಿಕೃತ ವೆಬ್‌ಸೈಟ್ (cdac.in) ಮೂಲಕ 2025 ಫೆಬ್ರವರಿ 22ರಿಂದ2025 ಮಾರ್ಚ್ 23ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಯೋಮಿತಿ :
ಗರಿಷ್ಠ 56 ವರ್ಷ ವಯೋಮಿತಿಯನ್ನು ಮೀರಿರಬಾರದು. ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, C-DAC ಅಧಿಕೃತ ವೆಬ್‌ಸೈಟ್ (cdac.in) ಗೆ ಭೇಟಿ ನೀಡಿ.
ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ :
Comments