ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅನ್ನು 1969 ಆ.15 ರಂದು ಸ್ಥಾಪನೆ ಮಾಡಲಾಗಿದ್ದು, ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಖಾಲಿ ಇರುವ 23 ಜೂನಿಯರ್ ರಿಸರ್ಚ್ ಫೆಲೋ ಮತ್ತು ರಿಸರ್ಚ್ ಅಸೋಸಿಯೇಟ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕ ದೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಭಾರತದ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಗಳ ವಿವರ :
ಜೂನಿಯರ್ ರಿಸರ್ಚ್ ಫೆಲೋ (JRF): 21 ಹುದ್ದೆಗಳು
ರಿಸರ್ಚ್ ಅಸೋಸಿಯೇಟ್-I: 2 ಹುದ್ದೆಗಳು
ವಿದ್ಯಾರ್ಹತೆ:
ಜೂನಿಯರ್ ರಿಸರ್ಚ್ ಫೆಲೋ (JRF): ಅಭ್ಯರ್ಥಿಗಳು M.E ಅಥವಾ M.Tech, ಅಥವಾ M.Sc ಪದವಿ ಹೊಂದಿರಬೇಕು.
ರಿಸರ್ಚ್ ಅಸೋಸಿಯೇಟ್-I: ಅಭ್ಯರ್ಥಿಗಳು M.E ಅಥವಾ M.Tech, ಅಥವಾ Ph.D ಪದವಿ ಹೊಂದಿರಬೇಕು.
ವಯೋಮಿತಿ:
ಜೂನಿಯರ್ ರಿಸರ್ಚ್ ಫೆಲೋ (JRF): ಗರಿಷ್ಠ 28 ವರ್ಷ
ರಿಸರ್ಚ್ ಅಸೋಸಿಯೇಟ್-I: ಗರಿಷ್ಠ 35 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ
ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ
ವೇತನ ಶ್ರೇಣಿ:
ಜೂನಿಯರ್ ರಿಸರ್ಚ್ ಫೆಲೋ (JRF): ರೂ.37,000/- ರಿಂದ ರೂ.42,000/- ಪ್ರತಿ ತಿಂಗಳು
ರಿಸರ್ಚ್ ಅಸೋಸಿಯೇಟ್-I: ರೂ.58,000/- ಪ್ರತಿ ತಿಂಗಳು
ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 22 ಮಾರ್ಚ್ 2025 ರಿಂದ 20 ಏಪ್ರಿಲ್ 2025 ರವರೆಗೆ ಇಸ್ರೋ ಅಧಿಕೃತ ವೆಬ್‌ಸೈಟ್ (isro.gov.in) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಮುಖ್ಯ ದಿನಾಂಕಗಳು:
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 22 ಮಾರ್ಚ್ 2025
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 20 ಏಪ್ರಿಲ್ 2025
ಹೆಚ್ಚಿನ ಮಾಹಿತಿಗಾಗಿ ಮತ್ತು ಅಧಿಕೃತ ಅಧಿಸೂಚನೆಗಾಗಿ, ದಯವಿಟ್ಟು ಇಸ್ರೋ ಅಧಿಕೃತ ವೆಬ್‌ಸೈಟ್ (isro.gov.in) ಗೆ ಭೇಟಿ ನೀಡಿ.
Comments