ಪದವಿ ಪಾಸಾದ ಅಭ್ಯರ್ಥಿಗಳಿಂದ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
Tags: Degree
Published by: Yallamma G | Date:17 ಮಾರ್ಚ್ 2025
not found

ಭಾರತ ಸರ್ಕಾರದ ಭಾರತೀಯ ಅಂಚೆ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾಲಿ ಇರುವ 51 ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿಗಾಗಿ  ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹದಾಗಿರುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಭಾರತದ ಪ್ರಜೆಯಾಗಿರಬೇಕು. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2025 ಮಾರ್ಚ್ 21ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.


ಹುದ್ದೆಗಳ ವಿವರ :
ಹುದ್ದೆಯ ಹೆಸರು : ಸರ್ಕಲ್ ಆಧಾರಿತ ಎಕ್ಸಿಕ್ಯೂಟಿವ್
ಒಟ್ಟು ಹುದ್ದೆಗಳು : 51
ಹುದ್ದೆಯ ಸ್ವರೂಪ : ಒಪ್ಪಂದ ಆಧಾರಿತ


ವಿದ್ಯಾರ್ಹತೆ :ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಶಾಖೆಯ ಪದವಿ ಹೊಂದಿರಬೇಕು. ಅರ್ಜಿದಾರರು ಅರ್ಜಿ ಸಲ್ಲಿಸುತ್ತಿರುವ ರಾಜ್ಯದ ನಿವಾಸಿಯಾಗಿರುವವರಿಗೆ ಆದ್ಯತೆ ನೀಡಲಾಗುತ್ತದೆ.

ವಯೋಮಿತಿ :
ಕನಿಷ್ಠ ವಯಸ್ಸು : 21 ವರ್ಷ
ಗರಿಷ್ಠ ವಯಸ್ಸು : 35 ವರ್ಷ
ವಯೋಮಿತಿಯಲ್ಲಿ ಸಡಿಲಿಕೆ : ಸರ್ಕಾರಿ ನಿಯಮಾವಳಿಗಳ ಪ್ರಕಾರ ಅನ್ವಯಿಸುತ್ತದೆ.


ವೇತನ :ಪ್ರತಿ ತಿಂಗಳು ರೂ. 30,000/- (ಹೆಚ್ಚುವರಿ ಬೋನಸ್ ಅಥವಾ ಭತ್ಯೆಗಳು ಇಲ್ಲ)


ಅರ್ಜಿ ಶುಲ್ಕ :
SC/ST/PWD ಅಭ್ಯರ್ಥಿಗಳಿಗೆ: ರೂ. 150/-
ಇತರೆ ಎಲ್ಲಾ ಅಭ್ಯರ್ಥಿಗಳಿಗೆ: ರೂ. 750/-

ಅರ್ಜಿ ಸಲ್ಲಿಸುವ ವಿಧಾನ :
- IPPB ಅಧಿಕೃತ ವೆಬ್‌ಸೈಟ್ (ippbonline.com) ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಕೆಯ ನಂತರ, ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆಯನ್ನು ಸಂರಕ್ಷಿಸಿ.


ಮುಖ್ಯ ದಿನಾಂಕಗಳು :
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 2025 ಮಾರ್ಚ್ 1
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 2025 ಮಾರ್ಚ್ 21


ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಸಲ್ಲಿಸಲು, IPPB ಅಧಿಕೃತ ವೆಬ್‌ಸೈಟ್ (ippbonline.com) ಗೆ ಭೇಟಿ ನೀಡಿ.

Comments

*