ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)ನಲ್ಲಿ ಖಾಲಿ ಇರುವ 47 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
Published by: Hanamant Katteppanavar | Date:3 ಜನವರಿ 2021
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)ನಲ್ಲಿ ಖಾಲಿ ಇರುವ 47 ಎಂಜಿನಿಯರಿಂಗ್ ಸಹಾಯಕ ಮತ್ತು ತಾಂತ್ರಿಕ ಅಟೆಂಡೆಂಟ್ ಕಾರ್ಯನಿರ್ವಾಹಕೇತರ ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ್, ಒಡಿಶಾ, ಛತ್ತೀಸಗಡ, ಆಂಧ್ರಪ್ರದೇಶ, ತಮಿಳುನಾಡು, ಹಿಮಾಚಲ ಪ್ರದೇಶ, ಪಂಜಾಬ್, ಜಾರ್ಖಂಡ್, ಅಸ್ಸಾಂ ಮತ್ತು ಹರಿಯಾಣದಲ್ಲಿ ಪೂರ್ಣ ಸಮಯದ ಆಧಾರದ ಮೇಲೆ ನೇಮಕಗೊಂಡ ಅಭ್ಯರ್ಥಿಗಳನ್ನು ಪೋಸ್ಟ್ ಮಾಡಲಾಗುವುದು.
* ಅರ್ಜಿ ಪ್ರಕ್ರಿಯೆಯು ಡಿಸೆಂಬರ್ 22, 2020 ರಂದು ಪ್ರಾರಂಭಗೊಂಡು ಮತ್ತು ಜನವರಿ 15, 2021 ರಂದು ಕೊನೆಗೊಳ್ಳುಲಿದೆ.
* ಹುದ್ದೆಗಳ ವಿವರ :
- ಸಹಾಯಕ ಎಂಜಿನಿಯರಿಂಗ್ - 27 ಹುದ್ದೆಗಳು
- ತಾಂತ್ರಿಕ ಅಟೆಂಡೆಂಟ್- 20 ಹುದ್ದೆಗಳು
- ಒಟ್ಟು- 47 ಹುದ್ದೆಗಳು
No. of posts: 47
Comments